ಟೈಸನ್ ಚಿತ್ರದ ಬಿಡುಗಡೆ ಹುಮ್ಮಸ್ಸಿನಲ್ಲಿರುವ ನಟಿ ಉರ್ಮಿಳ ಗಾಯಿತ್ರಿ ಮತ್ತೊಂದು ಚಿತ್ರದ ತಯಾರಿಯಲ್ಲಿದ್ದಾರೆ. ಚಿತ್ರದ ಹೆಸರು ಸ್ಮೈಲ್ ಪ್ಲೀಸ್.
ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದ ರಘು ಸಮರ್ಥ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ಧರಿಸುತ್ತಿದ್ದಾರೆ. ಚಿತ್ರವನ್ನು ಕೆ. ಮಂಜು ಅವರು ನಿರ್ಮಿಸುತ್ತಿದ್ದಾರೆ.
ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಮೈಲ್ ಪ್ಲೀಸ್ ಚಿತ್ರಕ್ಕೆ ನಾಯಕಿ ಅನ್ವೇಷಣೆಯಲ್ಲಿದ್ದ ನಿರ್ಮಾಪಕರಿಗೆ ಟೈಸನ್ ನಲ್ಲಿ ಅಭಿನಯಿಸಿರುವ ಉರ್ಮಿಳ ಅವರ ಕೆಲಸವನ್ನು ನೋಡಿ. ಮೆಚ್ಚಿ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ.
ಚಿತ್ರದಲ್ಲಿ ಹಿರಿಯ ನಟರಾದ ಅನಂತ್ ನಾಗ್ ಮತ್ತು ರಂಗಾಯಣ ರಘು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಚಿತ್ರಕ್ಕಾಗಿ ತಯಾರಿ ನಡೆಯುತ್ತಿದ್ದು, ಚಿತ್ರ ಮಾರ್ಚ್ ಅಥವಾ ಏಪ್ರಿಲ್ ಕೊನೆಯ ವಾರದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.
ಏತನ್ಮಧ್ಯೆ ದರ್ಶನ್ ಅಭಿನಯದ ಜಗ್ಗು ದಾದಾದಲ್ಲಿ ಉರ್ಮಿಳ ನಟಿಸುತ್ತಿದ್ದು, ಚಿತ್ರವನ್ನು ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗ್ಡೆ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಉರ್ಮಿಳ ಬಾರ್ ನರ್ತಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.