ಸಾಹಸ ಪ್ರದಾನ ಚಿತ್ರಕ್ಕಾಗಿ ಸೂರಜ್ ಗೌಡ ಭರ್ಜರಿ ತಯಾರಿ

ಸ್ಯಾಂಡಲ್ ವುಡ್ ನಟ ದರ್ಶನ್ ಕುಟುಂಬದ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಕವಿರಾಜ್ ನಿರ್ದೇಶಕದಲ್ಲಿ ಮೂಡಿಬಂದಿದ್ದ ಮದುವೆಯ ಮಮತೆಯ ಕರೆಯೋಲೆ ಚಿತ್ರದ...
ಸೂರಜ್ ಗೌಡ
ಸೂರಜ್ ಗೌಡ
Updated on
ಸ್ಯಾಂಡಲ್ ವುಡ್ ನಟ ದರ್ಶನ್ ಕುಟುಂಬದ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಕವಿರಾಜ್ ನಿರ್ದೇಶಕದಲ್ಲಿ ಮೂಡಿಬಂದಿದ್ದ ಮದುವೆಯ ಮಮತೆಯ ಕರೆಯೋಲೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸೂರಜ್ ಗೌಡ ಇದೀಗ ಸಾಹಸ ಪ್ರಧಾನ ಚಿತ್ರಕ್ಕಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. 
ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ಚಾಕೋಲೆಟ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಸೂರಜ್ ಗೌಡ ಇದೀಗ ಸಾಹಸ ಪ್ರದಾನ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿದ್ದು, ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕಾಣಿಸಿಕೊಳ್ಳಬೇಕೆಂದು ಜಿಮ್ ನಲ್ಲಿ ಕಸರತ್ತು ಮಾಡಿ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಆ್ಯಬ್ಸ್ ತಯಾರಿಯಲ್ಲಿದ್ದಾರೆ. 
ಗಾಂಧೀನಗರದಲ್ಲಿ ಚಾಕೋಲೆಟ್ ಬಾಯ್ ರೀತಿ ಇದ್ದರೆ ಅವಕಾಶಗಳು ಕಡಿಮೆ. ಹೀಗಾಗಿ ಆಕ್ಷನ್ ಪ್ರಧಾನ ಚಿತ್ರಗಳಲ್ಲಿ ನಟಿಸುವ ಸಲುವಾಗಿ ಸಿಕ್ಸ್ ಪ್ಯಾಕ್ ತಯಾರಿಯಲ್ಲಿರುವುದಾಗಿ ಸೂರಜ್ ಗೌಡ ಹೇಳಿದ್ದಾರೆ. 
ಬಿಗ್ ಬ್ಯಾನರ್ ನಡಿಯಲ್ಲಿ ಗಾಂಧೀನಗರಕ್ಕೆ ಎಂಟ್ರಿ ಕೊಟ್ಟರು. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುವ ಆತುರವಿಲ್ಲ. ಚಿತ್ರರಂಗದಲ್ಲಿ ಸ್ಥಿರವಾಗಿ ನಿಲ್ಲಬೇಕಾದರೆ ಎಲ್ಲಾದಕ್ಕೂ ಸಿದ್ಧರಾಗಿರಬೇಕು. ನನಗೆ ಸೂಕ್ತವಾದ ಪಾತ್ರಗಳು ಸಿಕ್ಕರಷ್ಟೇ ಅಭಿನಯಿಸುತ್ತೇನೆ ಎಂದು ಹೇಳಿದ್ದಾರೆ. 
ಸದ್ಯ ಫೆಬ್ರವರಿ 28 ರಂದು ರಾಮನಗರದಲ್ಲಿ ನಡೆಯುವ ಮ್ಯಾರಥೋನ್ ನ ರಾಯಭಾರಿಯಾಗಿರುವ ಸೂರಜ್ ಗೌಡ ಅದರ ತಯಾರಿಯಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com