ನವದೆಹಲಿ: ಭರತನಾಟ್ಯ ನೃತ್ಯಗಾರ್ತಿ ಮತ್ತು ನೃತ್ಯನಿರ್ದೇಶಕಿ ರುಕ್ಮಿಣಿ ದೇವಿ ಅರುಂಡೇಲ್ ಅವರ ೧೧೨ ಜನ್ಮ ವರ್ಷಾಚರಣೆ ಅಂಗವಾಗಿ ದೂಡಲ್ ಬಿಡಿಸುವ ಮೂಲಕ ಗೂಗಲ್ ಗೌರವ ಸಲ್ಲಿಸಿದೆ.
೧೯೦೪ ಫೆಬ್ರವರಿ ೨೯ ರಂದು ಜನಿಸಿದ್ದ ರುಕ್ಮಿಣಿ ದೇವಿ, ಭಾರತೀಯ ಶಾಸ್ತ್ರೀಯ ನೃತ್ಯದ ಪುನರುಜ್ಜೀವನದ ಹರಿಕಾರರಲ್ಲಿ ಒಬ್ಬರು ಎಂದೇ ಪರಿಗಣಿಸಲಾಗುತ್ತದೆ.
೧೯೨೦ ರಲ್ಲಿ ಈ ಕಲೆಯನ್ನು ಕೀಳು ಎಂದು ಹಲವು ಮೂಲಗಳಿಂದ ವಿರೋಧ ಬಂದರೂ, ರುಕ್ಮಿಣಿ ದೇವಿ ಹಠ ತೊಟ್ಟು ಪರಿಣಿತಿ ಪಡೆದರು ಎಂದು ದಾಖಲಿಸಲಾಗಿದೆ. ಮೊದಲಿಗೆ ಸಾಧಿರ್ ಎಂದು ಕರೆಯಲ್ಪಡುತ್ತಿದ್ದ ಭರತನಾಟ್ಯ ಶಾಸ್ತ್ರೀಯ ನೃತ್ಯದ ಹೊಸ ಹೆಸರಿಗೆ ಇ ಕೃಷ್ಣ ಅಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಕಾರಣ ಎನ್ನಲಾಗುತ್ತದೆ. ಇದಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟವರೂ ಅವರೇ.
1977 ರಲ್ಲಿ ಮೊರಾರ್ಜಿ ದೇಸಾಯಿ ಅವರು ರುಕ್ಮಿಣಿ ದೇವಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ನೇಮಕ ಮಾಡಿದ್ದರು, ಅದನ್ನು ಅವರು ನಿರಾಕರಿಸಿದ್ದರು.
ರುಕ್ಮಿಣಿ ದೇವಿ ಅವರ ಸಾಧನೆಗಾಗಿ ಪದ್ಮ ಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Advertisement