ಸಿಂಬು ಬೀಪ್ ಹನ್ಸಿಕಾ ಸೈಲೆಂಟ್

ಅಶ್ಲೀಲ ಹಾಡಿನಿಂದ ವಿವಾದಕ್ಕೀಡಾಗಿರುವ ಮಾಜಿ ಪ್ರಿಯಕರ ಸಿಂಬು ಬಗ್ಗೆ ಹನ್ಸಿಕಾಳಿಗೆ ಚೆನ್ನಾಗಿ ಗೊತ್ತು. ಹೀಗೆ ದುರ್ವರ್ತನೆ ತೋರಿಯೇ ಆತ ತನ್ನಿಂದ ದೂರ ಆಗಿದ್ದು...
ಹನ್ಸಿಕ ಮೊಟ್ವಾಣಿ, ಸಿಂಬು
ಹನ್ಸಿಕ ಮೊಟ್ವಾಣಿ, ಸಿಂಬು
Updated on

ಅಶ್ಲೀಲ ಹಾಡಿನಿಂದ ವಿವಾದಕ್ಕೀಡಾಗಿರುವ ಮಾಜಿ ಪ್ರಿಯಕರ ಸಿಂಬು ಬಗ್ಗೆ ಹನ್ಸಿಕಾಳಿಗೆ ಚೆನ್ನಾಗಿ ಗೊತ್ತು. ಹೀಗೆ ದುರ್ವರ್ತನೆ ತೋರಿಯೇ ಆತ ತನ್ನಿಂದ ದೂರ ಆಗಿದ್ದು, ನಯನತಾರಾ-ತ್ರಿಷಾಳನ್ನೂ ಹೀಗೆಯೇ ದೂರ ಮಾಡಿಕೊಂಡಿದ್ದು ಅನ್ನೋದೂ ಆಕೆಗೆ ಗೊತ್ತಿರೋ ವಿಚಾರ ತಮಿಳಿನ ಸೈಲೆಂಟ್ ಕ್ವೀನ್ ಹನ್ಸಿಕಾ ಮಾತಾಡ್ತಾಳೆ ಅಂದ್ರೆ ಅದು ಸಿನಿಮಾದಲ್ಲಿ ಅಥವಾ ಸಿನಿಮಾ ಬಿಡುಗಡೆ ವೇಳೆಯಷ್ಟೇ! ಇದು ಚೆನ್ನೈನಲ್ಲಿ ಸದ್ಯ ಚಾಲ್ತಿಯಲ್ಲಿರುವ ಜೋಕ್. ಬೇರೆ ವೇಳೆ ಹನ್ಸಿಕಾ ಮಾತಾಡಲ್ವಾ ಅಂದ್ರೆ, ಮಾತಾಡ್ತಾಳೆ. ಆದರೆ, ನಿರ್ಣಾಯಕ ಸಮಯಗಳಲ್ಲಿ ತೀರಾ ಗಪ್ ಚುಪ್ ಆಗಿರೋದು ಹನ್ಸಿಕಾ ಮೊಟ್ವಾನಿಯ ಸ್ಪೆಷಾಲಿಟಿ. ಅದರಲ್ಲೂ ಮುರಿದು ಬಿದ್ದಿರುವ ಸಿಂಬು ಜೊತೆಗಿನ ಸಂಬಂಧದ ಬಗ್ಗೆ ಹನ್ಸಿಕಾ ಇದುವರೆಗೆ ಏನೂ ಮಾತಾಡಿಯೇ ಇಲ್ಲ. ಆದರೆ, ಈಗಲಾದರೂ ಮಾತಾಡ್ತಾಳಾ ಅಂತ ಕಾಯ್ತಿದೆ ಚೆನ್ನೈ. ವರುಷಕ್ಕೆ ಎರಡು ಮೂರು  ಸಿನಿಮಾ ಮಾಡ್ಕೊಂಡು, ಕಾಂಟ್ರವರ್ಸಿಯಲ್ಲೇ ಕಾಲ ಕಳೆಯುವ ನಟ ಸಿಂಬು ಮತ್ತೊಂದು ವಿವಾದವನ್ನು ಮೈಮೇಲೆ ಎಳಕೊಂಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಸಿಂಬು ತಯಾರಿಸಿರುವ 'ಬೀಪ್' ಸಾಂಗ್, ಸೋಷಿಯಲ್ ಮೀಡಿಯಾಗಳಲ್ಲಿ ಪ್ರತ್ಯಕ್ಷವಾಗಿ ವಿವಾದವನ್ನೇ ಸೃಷ್ಟಿಸಿದೆ. ಮಹಿಳೆಯರ ಬಗ್ಗೆ ಅಸಹ್ಯವಾಗಿ ಪದಗಳನ್ನು ಪ್ರಯೋಗಿಸಿ ರಚಿಸಲಾದ ಈ ಹಾಡಿನ ವಿರುದ್ಧ ಭಾರಿ ಪ್ರತಿಭಟನೆಗಳೇ ನಡೆದಿವೆ. ಸಿಂಬು ಮೇಲೆ, ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಮೇಲೆ ಕೇಸುಗಳೂ ಬಿದ್ದಿವೆ. ಸಿಂಬು ದೇಶ ಬಿಟ್ಟು ತೆರಳದಂತೆ ಚೆನ್ನೈನ ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟಿಸ್ ಅನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಂಧನ ಭೀತಿಯಲ್ಲಿರುವ ಸಿಂಬು ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿ ಆಗಿದೆ. ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಿಂಬು ಸಾಕಷ್ಟು ಯತ್ನ ಮಾಡಿ ಸೋತಿದ್ದಾರೆ. ಅನಿರುದ್ಧ ಈಗ ಲಂಡನ್ನಿನಲ್ಲಿದ್ದು, 'ಇನ್ನು 15 ದಿನದೊಳಗೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತೇನೆ' ಎಂದು ಪೊಲೀಸರಿಗೂ ತಿಳಿಸಿದ್ದಾರೆ. ಈ ಅಶ್ಲೀಲ ಸಾಹಿತ್ಯದ ವಿರುದ್ಧ ಪ್ರತಿಭಟನೆಗಳು ನಡೆದರೂ, ಒಬ್ಬಳು ನಟಿಯೂ ಇದರ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ಹನ್ಸಿಕಾ ಮೊಟ್ವಾನಿ ಕೊಡುತ್ತಾಳೆಂದು ಕಾಯುತ್ತಿದ್ದವರಿಗೆ ಈಗ ನಿರಾಶೆ ಆಗಿದೆಯಂತೆ. ತನ್ನೊಂದಿಗೆ ದುರ್ವರ್ತನೆ ತೋರಿದ ಕಾರಣಕ್ಕೆ ಹನ್ಸಿಕಾ, ಸಿಂಬುವಿನಿಂದ ದೂರವಾಗಿದ್ದು. ಆಗಲೂ ಹನ್ಸಿಕಾ ಮಾತಾಡಿರಲಿಲ್ಲ. ಒಂದೊಮ್ಮೆ ಸಿಂಬು 'ಸಿಲ್ವರ್ ಸ್ಪೂನನ್ನು ಬಾಯಿಯಲ್ಲಿಟ್ಟುಕೊಂಡು ಹುಟ್ಟಿದವನು ನಾನು. ಆದರೆ, ಇತ್ತೀಚೆಗೆ ಸಿನಿಮಾ-ಬದುಕು ಎರಡರಲ್ಲೂ  ಸೋಲು ಕಾಣುತ್ತಿದ್ದೇನೆ. ಹಣ, ಚಿತ್ರಗಳನ್ನೆಲ್ಲ ಕಳಕೊಂಡಾಗ ಕಡೇಪಕ್ಷ ನನ್ನ ಹುಡುಗಿ (ಹನ್ಸಿಕಾ) ಜೊತೆಗಿರುತ್ತಾಳೆ ಅಂದುಕೊಂಡಿದ್ದೆ. ಕೇವಲ ಉಸಿರು ಮಾತ್ರ ನನ್ನೊಂದಿಗೆ ಇದೆ' ಎಂದು ಯೂಟ್ಯೂಬ್‍ನಲ್ಲಿ ಹತಾಶನಾಗಿ ಹೇಳಿಕೊಂಡಾಗಲೂ ಹನ್ಸಿಕಾ ಮಾತಾಡಿರಲಿಲ್ಲ. ಸಿಂಬು ಇರೋದೇ ಹಾಗೆ ಅನ್ನೋದೂ ಹನ್ಸಿಕಾಳಿಗೆ ಗೊತ್ತು. ನಯನತಾರಾ, ತ್ರಿಷಾ ಜೊತೆಗೆ ಇದೇ ರೀತಿ  ವರ್ತಿಸಿಯೇ  ಅವರನ್ನೆಲ್ಲ ದೂರ ಮಾಡಿಕೊಂಡ ಅನ್ನೋದೂ ಹನ್ಸಿಕಾಳಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಈಗ ಸಿಂಬುವಿನ ಅಶ್ಲೀಲ ಹಾಡಿನ ಬಗ್ಗೆ ಮಾತೆತ್ತಿದರೆ, ಪ್ರೇಮ ಸಂಬಂಧವಿದ್ದಾಗಿನ  ಹಸ್ಯಗಳೆಲ್ಲ  ಹೊರಬರುತ್ತವೆಂಬ ಆತಂಕವೂ ಹನ್ಸಿಕಾಳಿಗೆ ಇದೆಯಂತೆ. ಹೀಗಾಗಿ, ಹನ್ಸಿಕಾ ಕೂಡ ಸಿಂಬು ಹಾಡಿನ ವಿರುದ್ಧ ಹೇಳಿಕೆ ಕೊಡುತ್ತಿಲ್ವಂತೆ. 'ಯಾರಿಗೆ ಕಾಂಟ್ರವರ್ಸಿ ಹುಡುಗನ ಸಹವಾಸ?' ಅನ್ನೋದು ಹನ್ಸಿಕಾ ಪ್ರಶ್ನೆಯಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com