ರಥಾವರ ರಿಮೇಕ್ ನಲ್ಲಿ ತಮಿಳು ನಟ ವಿಶಾಲ್

ಶ್ರೀ ಮುರಳಿ ಅಭಿನಯದ ರಥಾವರ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, 50 ದಿನಗಳತ್ತ...
ಎಡಚಿತ್ರ ರಥಾವರ ಚಿತ್ರದ ಸ್ಟಿಲ್ ಮತ್ತು ಬಲಚಿತ್ರದಲ್ಲಿ ನಟ ವಿಶಾಲ್
ಎಡಚಿತ್ರ ರಥಾವರ ಚಿತ್ರದ ಸ್ಟಿಲ್ ಮತ್ತು ಬಲಚಿತ್ರದಲ್ಲಿ ನಟ ವಿಶಾಲ್

ಶ್ರೀ ಮುರಳಿ ಅಭಿನಯದ ರಥಾವರ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, 50 ದಿನಗಳತ್ತ ದಾಪುಗಾಲಿಡುತ್ತಿದೆ. ಇನ್ನೊಂದು ಖುಷಿಯ ವಿಷಯ ಎಂದರೆ ಈ ಚಿತ್ರದ ರಿಮೇಕ್ ಹಕ್ಕನ್ನು ವಿಶಾಲ್ ಫಿಲ್ಮ್ ಫ್ಯಾಕ್ಟರಿ ಖರೀದಿಸಿದ್ದು, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ.

ಕನ್ನಡದಲ್ಲಿ ರಥಾವರ ನಿರ್ಮಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಅವರೇ ಇತರ ಮೂರು ಭಾಷೆಗಳಲ್ಲಿ ನಿರ್ದೇಶನ ಮಾಡುತ್ತಿದ್ದು, ಮುರಳಿ ಪಾತ್ರವನ್ನು ಮೂರು ರಿಮೇಕ್ ಚಿತ್ರಗಳಲ್ಲಿ ವಿಶಾಲ್ ನಟಿಸಲಿದ್ದಾರೆ.

ಹೊಸ ಪ್ರಾಜೆಕ್ಟ್ ಬಗ್ಗೆ ಖುಷಿಯಾಗಿ ಮಾತನಾಡಿರುವ ಚಂದ್ರಶೇಖರ್ ಬಂಡಿಯಪ್ಪ, ಎಲ್ಲಾ ಅಂತಿಮವಾಗಿದೆ. ಯಾವಾಗ ಚಿತ್ರದ ಶೂಟಿಂಗ್ ಆರಂಭ ಎಂಬುದು ಮಾತ್ರ ಬಾಕಿ ಉಳಿದಿದೆ. ಬಹುಶಃ ಸಂಕ್ರಾಂತಿ ಮುಗಿದ ನಂತರ ಚಾಲನೆ ಸಿಗಬಹುದು. ವಿಶಾಲ್ ಅವರ ಅಭಿನಯದ ಕಥಕ್ಕಳಿ ಚಿತ್ರ ತಮಿಳಿನಲ್ಲಿ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆ. ಈಗ ಅವರು ಅದರ ಪ್ರಮೋಶನ್ ಬ್ಯುಸಿಯಲ್ಲಿದ್ದಾರೆ. ರಥಾವರ ಮೂಲ ಚಿತ್ರವನ್ನು ಅವರು ನೋಡಿ ಖುಷಿಪಟ್ಟಿದ್ದು, ರಿಮೇಕ್ ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಕನ್ನಡ ಚಿತ್ರಗಳು ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿರುವುದಕ್ಕೆ ಚಂದ್ರಶೇಖರ್ ಖುಷಿಯಾಗಿದ್ದಾರೆ. ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗುತ್ತಿವೆ. ಇದೇ ರೀತಿ ಇತ್ತೀಚಿನ ದಿನಗಳಲ್ಲಿ ಕನ್ನಡದ ಹಿಟ್ ಚಿತ್ರಗಳು ಬೇರೆ ಭಾಷೆಗಳ ನಿರ್ದೇಶಕರ ಗಮನ ಸೆಳೆಯುತ್ತಿರುವುದು ಸಂತೋಷದ ಸಂಗತಿ. ಇಂದಿನ ಸ್ಯಾಂಡಲ್ ವುಡ್ ನಿರ್ದೇಶಕರು ಶಿಕ್ಷಣವಂತರಾಗುತ್ತಿದ್ದಾರೆ. ಸಿನಿಮಾ ಬಗ್ಗೆ ಅವರ ದೃಷ್ಟಿಕೋನ ಬದಲಾಗುತ್ತಿದೆ. ಅನೇಕ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತಿವೆ.

ಚಂದ್ರಶೇಖರ್ ಅವರನ್ನು ಹುಡುಕಿಕೊಂಡು ಅನೇಕ ಕನ್ನಡದ ನಿರ್ದೇಶಕರೂ ಬರುತ್ತಿದ್ದಾರೆ. ಆದರೆ ಇವರು ಯಾವುದನ್ನೂ ಅಂತಿಮ ಮಾಡಿಲ್ಲ. ''ರಥಾವರ ಚಿತ್ರ 50 ದಿನಗಳನ್ನು ಪೂರೈಸಲು ನಾನು ಕಾಯುತ್ತಿದ್ದೇನೆ. ಆ ಬಳಿಕವಷ್ಟೇ ಮುಂದಿನ ಕನ್ನಡ ಚಿತ್ರದ0 ಬಗ್ಗೆ ನಿರ್ಧರಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com