ನಿಮ್ಮ ಮುಂದೆ ದೇವರನಾಡು

ಬಿ. ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಸಿನಿಮಾ ಇದೇ ತಿಂಗಳು ತೆರೆ ಕಾಣುತ್ತಿದೆ. ಸಾಮಾನ್ಯವಾಗಿ ಬ್ರಿಡ್ಜ್ ಅಥವಾ ಕಲಾತ್ಮಕ ಸಿನಿಮಾಗಳನ್ನು ಕೇವಲ ಚಿತ್ರೋತ್ಸವ...
ಪ್ರಕಾಶ್ ರೈ
ಪ್ರಕಾಶ್ ರೈ

ಬಿ. ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಸಿನಿಮಾ ಇದೇ ತಿಂಗಳು ತೆರೆ ಕಾಣುತ್ತಿದೆ. ಸಾಮಾನ್ಯವಾಗಿ ಬ್ರಿಡ್ಜ್ ಅಥವಾ ಕಲಾತ್ಮಕ ಸಿನಿಮಾಗಳನ್ನು ಕೇವಲ ಚಿತ್ರೋತ್ಸವ, ಪ್ರಶಸ್ತಿಗಳಿಗೆ ಮಾತ್ರ ಸೀಮಿತಗೊಳಿಸುವವರ ನಡುವೆ `ನಾವೂ ಸಿನಿಮಾ ಮಾಡೋದು ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಲಿ ಅಂತಲೇ' ಎನ್ನುವ ಇಂಥ ಚಿತ್ರಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ನೋಡೇ ನೋಡ್ತಾರೆಂಬ ಭರವಸೆ `ದೇವರ ನಾಡಲ್ಲಿ'ಯಂಥ ಚಿತ್ರಗಳ ಶಕ್ತಿಯನ್ನು ಹೆಚ್ಚಿಸಿದೆ. ಹೀಗಾಗಿ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಬಿ. ಸುರೇಶ್ ನಿರ್ಧರಿಸಿದ್ದು, ಜ.15ಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೇವರನಾಡು ದರ್ಶನವಾಗಲಿದೆ. ಮೊದಲ ಹಂತದಲ್ಲಿ ಕೇವಲ ಮಲ್ಟಿಪ್ಲೆಕ್ಸ್‍ಗಳಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಲಿದ್ದು, ಮುಂದೆ ಹೊರ ದೇಶಗಳಲ್ಲಿ ಹಾಗೂ ರಾಜ್ಯದ ರೆಗ್ಯುಲರ್ ಟಾಕೀಸುಗಳಲ್ಲೂ ಈ ಸಿನಿಮಾ ಬಿಡುಗಡೆಯಾಗಲಿದೆ. ಪ್ರಕಾಶ್ ರೈ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅಚ್ಯುತ್ ಕುಮಾರ್, ಮನು ಹೆಗಡೆ, ದಿಶಾ ರಮೇಶ್, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ಮಾನಸ ಜೋಷಿ ಪ್ರಮುಖ ಪ್ರಾತ್ರಗಳಲ್ಲಿದ್ದಾರೆ. ಶೈಲಜಾ ನಾಗ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಂಬಣ್ಣದ ಚಿತ್ರದ ಫೋಸ್ಟರ್‍ಗಳು ವಿಭಿನ್ನವಾಗಿವೆ. `ಈ ಸಿನಿಮಾ ತುಂಬಾ ಸೂಕ್ಷ್ಮ ಕತೆಯನ್ನು ಒಳಗೊಂಡಿದೆ. ಅದ್ಭುತ ಸಿನಿಮಾ ಮಾಡಿದ್ದೇವೆ ಅಂತ ಹೇಳಲಾಗದು. ಆದರೆ, ಪ್ರಸ್ತುತ ವಿದ್ಯಮಾನಗಳನ್ನು ಹತ್ತಿರದಿಂದ ನೋಡುತ್ತಿರುವ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು. ಒಂದು ಘಟನೆ, ಒಂದು ಸನ್ನಿವೇಶ ಮತ್ತು ಅದರ ಹಿಂದೆ ಕೇಳಿಬರುವ ವ್ಯಕ್ತಿಗಳ ನಿಯಂತ್ರಣದಲ್ಲಿರುವ ವ್ಯವಸ್ಥೆ...ಈ ಎಲ್ಲವೂ ಬೇರೆಯದ್ದೇ ಆದ ಮುಖವಾಡಗಳನ್ನು ಒಳಗೊಂಡಿದೆ. ನಾವು ಕೇಳುವ ಮಾಹಿತಿಯೇ ಬೇರೆ, ವಾಸ್ತವವೇ ಬೇರೆ. ಅದು ಹೇಗೆ ಎನ್ನುವುದನ್ನು ಈ ಸಿನಿಮಾದಲ್ಲಿ ನೋಡಬಹುದು. ಅಪ್ಪಟ ಸಿನಿಪ್ರಿಯರಿಗೆ ಮತ್ತು ಸದ್ಯದ ವಿದ್ಯಮಾನಗಳ ಒಳನೋಟಗಳನ್ನು ಹುಡುಕುತ್ತಿರುವವರಿಗೆ ಬಹುಬೇಗ ಈ ಸಿನಿಮಾ ಹತ್ತಿರವಾಗುತ್ತದೆ. ಗಟ್ಟಿ ಕತೆ ಇದ್ದಾಗ ಅಂಥ ಸಿನಿಮಾ ಪ್ರತಿಯೊಬ್ಬನಿಗೂ ತಲುಪುತ್ತದೆ ಎನ್ನುವ ನಂಬಿಕೆ ನನ್ನದು. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಾರೆ. ಹೀಗಾಗಿ ಮೊದಲ ಚಿತ್ರವನ್ನು ಮಲ್ಟಿಪ್ಲೆಕ್ಸ್‍ಗಳಲ್ಲೇ ಬಿಡುಗಡೆ ಮಾಡುತ್ತಿದ್ದೇವೆ' ಎನ್ನುತ್ತಾರೆ ಬಿ. ಸುರೇಶ್. ಅದ್ವೈತ ಗುರುಮೂರ್ತಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಹಂಸಲೇಖ ಸಂಗೀತ ನೀಡಿದ್ದು, ಜೋನಿ ಹರ್ಷ ಸಂಕಲನ, ಶಶಿಧರ ಅಡಪ ಕಲಾ ನಿರ್ದೇಶನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com