ಯೆ ಹೈ ಮೊಹಬತ್ತೈ ನಟಿ ದಿವ್ಯಾಂಕಾ ಎಂಗೇಜ್‍ಮೆಂಟ್

ಹಿಂದಿ ಸೀರಿಯಲ್ ಲೋಕದ ಸ್ಪೂರದ್ರೂಪಿ ನಟಿ ದಿವ್ಯಾಂಕಾ ತ್ರಿಪಾಠಿಗೆ ಎಂಗೇಜ್‍ಮೆಂಟ್ ಆಗಿದೆ. ಸಹನಟ ವಿವೇಕ್ ದಾಹಿಯಾ ಜೊತೆ ಹೊಸ ಬದುಕಿಗೆ ಕಾಲಿಡುತ್ತಿದ್ದಾಳೆ ದಿವ್ಯಾಂಕಾ...
ದಿವ್ಯಾಂಕ ತ್ರಿಪಾಟಿ-ವಿವೇಕ್ ದಾಹಿಯಾ
ದಿವ್ಯಾಂಕ ತ್ರಿಪಾಟಿ-ವಿವೇಕ್ ದಾಹಿಯಾ
Updated on

ಹಿಂದಿ ಸೀರಿಯಲ್ ಲೋಕದ ಸ್ಪೂರದ್ರೂಪಿ ನಟಿ ದಿವ್ಯಾಂಕಾ ತ್ರಿಪಾಠಿಗೆ ಎಂಗೇಜ್‍ಮೆಂಟ್ ಆಗಿದೆ. ಸಹನಟ ವಿವೇಕ್ ದಾಹಿಯಾ ಜೊತೆ ಹೊಸ ಬದುಕಿಗೆ ಕಾಲಿಡುತ್ತಿದ್ದಾಳೆ ದಿವ್ಯಾಂಕಾ.

ಕನ್ನಡದಲ್ಲಿ ಅವನು ಮತ್ತು ಶ್ರಾವಣಿ ಸೀರಿಯಲ್ ನೋಡಿದ್ದೀರಲ್ವಾ? ಇದು ಹಿಂದಿ ಸೀರಿಯಲ್ ಯೆ ಹೈ ಮೊಹಬತ್ತೈನ ಕತೆ. ಅಲ್ಲಿ ಶ್ರಾವಣಿಯ ಪಾತ್ರದಲ್ಲಿ ನಟಿಸುತ್ತಿರುವವಳು ಇದೇ ದಿವ್ಯಾಂಕ ತ್ರಿಪಾಠಿ! ಯೆ ಹೈ ಮೊಹಬತ್ತೈ'ನಲ್ಲಿ ಎಸಿಪಿ ಅಭಿಷೇಕ್ ಸಿಂಗ್ ಆಗಿ ನಟಿಸುತ್ತಿರುವ ವಿವೇಕ್ ದಾಹಿಯಾ ಜೊತೆ ದಿವ್ಯಾಂಕಾಗೆ ಒಂದು ವರ್ಷಗಳಿಂದ ಪ್ರೇಮವಿತ್ತು.

ನಟ ಶಾರದ್ ಮಲ್ಹೋತ್ರ ಜೊತೆಗಿದ್ದ ಅಫೈರ್ ಮುರಿದುಬಿದ್ದ ಮೇಲೆ ದಿವ್ಯಾಂಕಾ, ವಿವೇಕ್ ಕಡೆಗೆ ದೃಷ್ಟಿ ನೆಟ್ಟಳು. ತೆರೆಯ ಮೇಲೆ ತುಂಬಾ ಡೀಸೆಂಟ್ ಆಗಿ ಕಾಣುವ ಈಕೆ ಅವಕಾಶ ಸಿಕ್ಕರೆ ಮೌಂಟ್ ಎವರೆಸ್ಟ್ ಅನ್ನು ಹತ್ತಿಬಿಡುವ ಹುಮ್ಮಸ್ಸಿನವಳು. ಈಕೆ ಕಲಿತಿದ್ದೇ ಮೌಂಟೇನೀರಿಂಗ್ ಕೋರ್ಸ್ ಅನ್ನು! ಮಧ್ಯಪ್ರದೇಶದ ಈ ಬೆಡಗಿ ರೈಫಲ್ ಶೂಟಿಂಗ್‍ನಲ್ಲೂ ತರಬೇತಿ ಪಡೆದಿದ್ದಾಳೆ.

ಭೋಪಾಲ್‍ನ ರೈಫಲ್ ಅಕಾಡೆಮಿಯಲ್ಲಿ ಗೋಲ್ಡ್ ಮೆಡಲ್ ಪಡೆದ ದಿವ್ಯಾಂಕಾ ಗುರಿತಪ್ಪಿ ಸೀರಿಯಲ್‍ಗೆ ಬಂದಿರೋ ಹಾಗಿದೆ. ಈಗ ಈ ಸುಂದರಿ ಪ್ರೇಮದ ಬಾಣವನ್ನು ವಿವೇಕ್‍ನ ಹೃದಯದತ್ತ ಛೂ ಬಿಟ್ಟಿದ್ದಾಳೆ. ಇದೇ ವರುಷದಲ್ಲೇ ಮದ್ವೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com