
ಮೈಸೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಮೈಸೂರಿನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅವರ ಚೊಚ್ಚಲ ಅಭಿನಯದ ದ್ಧೂರಿ ಬಜೆಟ್ ಚಿತ್ರ ಜಾಗ್ವಾರ್ ಸಿನಿಮಾದ ಟೀಸರ್ ರಿಲೀಸ್‌ಗೂ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಿನಿಮಾ ರಂಗಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟಿರುವ ನಿಖಿಲ್ ಕುಮಾರಸ್ವಾಮಿ, ಜಾಗ್ವಾರ್ ಸಿನಿಮಾಗೆಂದೇ ವಿಭಿನ್ನ ತಯಾರಿ ನಡೆಸಿ ಗಮನ ಸೆಳೆದಿದ್ದು, ಜಾಗ್ವಾರ್ ಸಿನಿಮಾ ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಈ ವೇಳೆ ಚಿತ್ರದ ಮೂಹೂರ್ತವನ್ನು ಅದ್ಧೂರಿಯಾಗಿ ನಡೆಸಿರುವ ಚಿತ್ರತಂಡ ಕನ್ನಡ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ಹೆಸರು ಮಾಡಿದೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ವಿಶೇಷ ಪೂಜೆ ಸಲ್ಲಿಸಿ ನಗರದ ಇನ್ಫೋಸಿಸ್ ಆವರಣದಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಜಾಗ್ವಾರ್ ಆರಂಭದಲ್ಲೇ ತನ್ನ ಖಡಕ್ ಫೈಟ್ ಲುಕ್‌ನಿಂದ ಜನರ ಗಮನ ಸೆಳೆದಿದೆ. ಈಗ ನಿಖಿಲ್ ಅವರ ಹುಟ್ಟು ಹಬ್ಬದಂದೇ ಅವರ ಮೊದಲ ಜಾಗ್ವಾರ್ ಸಿನಿಮಾದ ಟೀಸರ್ ರಿಲೀಸ್ ಮಾಡಲು ಎಲ್ಲಾ ಸಿದ್ಧತೆ ಮಾಡಲಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಿಖಿಲ್ ಕುಮಾರ್ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಜಾಗ್ವಾರ್ ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
Advertisement