ರಾಕಿಂಗ್ ಸ್ಟಾರ್ ಯಶ್ ಪ್ರೊ ಕಬಡ್ಡಿಗೆ ರಾಯಭಾರಿ

ಕೋಟ್ಯಂತರ ಜನರ ಇಷ್ಟದ ಕ್ರೀಡೆಯಾಗಿರುವ ಪ್ರೋ ಕಬಡ್ಡಿ ಲೀಗ್ ಗೆ ರಾಯಭಾರಿಯಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಆಯ್ಕೆಯಾಗಿದ್ದಾರೆ. ...
ನಟ ಯಶ್
ನಟ ಯಶ್
Updated on

ಬೆಂಗಳೂರು: ಕೋಟ್ಯಂತರ ಜನರ ಇಷ್ಟದ ಕ್ರೀಡೆಯಾಗಿರುವ ಪ್ರೋ ಕಬಡ್ಡಿ ಲೀಗ್ ಗೆ ರಾಯಭಾರಿಯಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಆಯ್ಕೆಯಾಗಿದ್ದಾರೆ. ಮೊದಲ ಬಾರಿ ಕ್ರೀಡೆಯೊಂದಕ್ಕೆ ರಾಯಭಾರಿಯಾಗ್ತಿರೋದಕ್ಕೆ ಯಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರೋ ಕಬಡ್ಡಿ ಮೂರನೇ ಆವೃತ್ತಿಗೆ ರಾಯಭಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಯಶ್ ನಾನು ಚಿಕ್ಕವನಿದ್ದಾಗ ಕಬಡ್ಡಿ ಆಡುತ್ತಿದ್ದೆ. ಪ್ರತಿಯೊಬ್ಬರು ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು.ಕಬಡ್ಡಿ ಇದೀಗ ಅತ್ಯಂತ ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಳ್ಳುತ್ತಿದೆ.ಮೊದಲ ಸೀಸನ್ ಗೆ ಹೋಲಿಸಿದ್ರೆ ಸೀಸನ್ 2 ನಲ್ಲೂ ಸಾಕಷ್ಟು ಬದಲಾವಣೆಗಳಾಗಿತ್ತು.ಅಲ್ಲದೇ ಈ ಸೀಸನ್ ಇನ್ನು ಚೆನ್ನಾಗಿರುತ್ತೆ ಅಂತಾ ನಂಬಿದ್ದೇನೆ ಅಂತಾ ಯಶ್ ಅವರು ಹೇಳಿದ್ದಾರೆ.

ಇನ್ನು ನನಗೆ ಸ್ಫೋರ್ಟ್ ತುಂಬಾನೇ ಚೆನ್ನಾಗಿ ಒಪ್ಪುತ್ತೆ. ಯಾಕಂದ್ರೆ ಅದು ಅಗ್ರೆಸಿವ್ ಆಗಿರುತ್ತೆ. ಸಾಕಷ್ಟು ಶಕ್ತಿ ಪ್ರದರ್ಶನ ಮಾಡ್ಬೇಕು. ಅಲ್ಲಿ ಎಲ್ಲರನ್ನು ಮನೋರಂಜನೆಗೊಳಿಸುವ ಜವಬ್ದಾರಿ  ನಮ್ಮ ಮೇಲಿರುತ್ತೆ ಅಂತಾ ಅವರು ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com