ಬಿಗ್ ಬಾಸ್ 3: ಶ್ರುತಿ ಬಿಗ್ ಬಾಸ್, ಚಂದನ್ ರನ್ನರ್ ಅಪ್?
ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ಫೈನಲ್ ನಲ್ಲಿ ನಟಿ ಶ್ರುತಿ ಗೆದ್ದಿದ್ದು, ಚಂದನ್ ರನ್ನರ್ ಅಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಮಾರು ನೂರು ದಿನಗಳ ಕಾಲ ರಂಜಿಸಿದ ಬಿಗ್ ಬಾಸ್ ಮನೆಯಲ್ಲಿ ಸದಸ್ಯರಲ್ಲಿ ಅಂತಿಮವಾಗಿ ಯಾರು ಗೆಲ್ಲುತ್ತಾರೆ ಅನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಇದೀಗ ಗ್ರ್ಯಾಂಡ್ ಫಿನಾಲೆಯಲ್ಲಿ ಮಾಸ್ಟರ್ ಆನಂದ್, ಪೂಜಾ ಗಾಂಧಿ, ರೆಹಮಾನ್ ಔಟ್ ಆಗಿದ್ದು, ಶ್ರುತಿ ಗೆದ್ದಿದ್ದು, ಚಂದನ್ ರನ್ನರ ಅಪ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂದು ಸಂಜೆ ಗ್ರ್ಯಾಂಡ್ ಫೈನಲ್ ಎಪಿಸೋಡ್ ಪ್ರಸಾರವಾಗಲಿದೆ.
ಗ್ರ್ಯಾಂಡ್ ಫಿನಾಲೆಯಲ್ಲಿ ಐವರು ಸೆಲೆಬ್ರೆಟಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ರೆಹಮಾನ್ ಮತ್ತು ಚಂದನ್ ಪರ ಭರ್ಜರಿ ಬ್ಯಾಟಿಂಗ್ ನಡೆದಿತ್ತು. ಕೆಲ ಮಾಹಿತಿಗಳ ಪ್ರಕಾರ ಬಿಗ್ ಬಾಸ್ ಕಿರೀಟ ಚಂದನ್ ಗೆ ಸಿಗುವ ನಿರೀಕ್ಷೆ ಹೆಚ್ಚಾಗಿತ್ತು.
ಕಳೆದ ಎರಡು ಸೀಸನ್ ನಲ್ಲೂ ಪುರುಷರೇ ಗೆದ್ದಿದ್ದರು. ಮೊದಲ ಸೀಸನ್ ನಲ್ಲಿ ವಿಜಯ ರಾಘವೇಂದ್ರ, ಸೀಸನ್-2 ಅಕುಲ್ ಬಾಲಾಜಿ ಬಿಗ್ ಬಾಸ್ ಪಟ್ಟ ಪಡೆದಿದ್ದರು. ಈ ಬಾರಿ ಮಹಿಳೆಯರಿಗೆ ಬಿಗ್ ಬಾಸ್ ಪಟ್ಟ ದೊರೆಯಲಿ ಅನ್ನುವ ಮಹಿಳಾ ಪ್ರೇಕ್ಷಕರ ಆಶಯ ಕೊನೆಗೂ ಈಡೇರಿದೆ.