ನಟಿಯಾಗಬೇಕೆಂದು ನಾನು ಯೋಚನೆ ಮಾಡಿರಲಿಲ್ಲ: ಸುಶ್ಮಿತಾ ಜೋಶಿ

ನಾನು ಯಾವತ್ತೂ ನಟಿಯಾಗಬೇಕೆಂದು ಯೋಚಿಸಿಯೇ ಇರಲಿಲ್ಲ, ಹಣೆಬರಹ ನನ್ನನ್ನು ಇಲ್ಲಿಗೆ ಕರೆತಂದಿದೆ ಎಂದು ರನ್ ಆಂಟನಿ ನಾಯಕಿ ಸುಶ್ಮಿತಾ ಜೋಶಿ ...
ಸುಶ್ಮಿತಾ ಜೋಶಿ
ಸುಶ್ಮಿತಾ ಜೋಶಿ

ಬೆಂಗಳೂರು: ನಾನು ಯಾವತ್ತೂ ನಟಿಯಾಗಬೇಕೆಂದು ಯೋಚಿಸಿಯೇ ಇರಲಿಲ್ಲ, ಹಣೆಬರಹ ನನ್ನನ್ನು ಇಲ್ಲಿಗೆ ಕರೆತಂದಿದೆ ಎಂದು ರನ್ ಆಂಟನಿ ನಾಯಕಿ ಸುಶ್ಮಿತಾ ಜೋಶಿ ಹೇಳಿದ್ದಾರೆ.

ರಘುಶಾಸ್ತ್ರಿ ನಿರ್ದೇಶನದ ರನ್ ಆಂಟನಿ ಚಿತ್ರದಲ್ಲಿ ವಿನಯ್ ರಾಜ್ ಜೊತೆ ನಾಯಕಿಯಾಗಿರುವ ಸುಶ್ಮಿತಾ ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಕಾಲೇಜಿನಲ್ಲಿ 3ನೇ ವರ್ಷದ ವ್ಯಾಸಂಗದಲ್ಲಿದ್ದಾರೆ. ಮೂಲತಃ ದೆಹಲಿಯವರಾದ ಸುಶ್ಮಿತಾ 2014 ರಲ್ಲಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದರು.

ಮಾಡೆಲ್ ಆಗಿರುವ ಸುಶ್ಮಿತಾ ರನ್ ಆಂಟನಿ ತಂಡಕ್ಕೆ ಕಾಣಿಸಿದ ಮೇಲೆ ಆಕೆಯನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು ಎಂದು ಸುಶ್ಮಿತಾ ಹೇಳುತ್ತಾರೆ.

ಶೀಘ್ರವೇ ರನ್ ಆಂಟನಿ ಚಿತ್ರ ಬಿಡುಗಡೆಯಾಗಲಿದ್ದು, ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ಯುವ ಪ್ರತಿಭೆಗಳೇ ಸೇರಿ ತಯಾರಿಸಿರುವ ಈ ಚಿತ್ರ ಹೇಗೆ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತದೆ ಎಂಬುದನ್ನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿನಯ್ ರಾಜ್ ಮತ್ತು ರುಕ್ಸರ್ ಜೊತೆ ನಟಿಸಿರುವ ಸುಶ್ಮಿತಾಗೆ ನಟನೆ ಕಲಿಯಲು ಸಿನಿಮಾ ನನಗೆ ಸಹಾಯ ಮಾಡಿತು. ಈ ಸೆಟ್ ನಲ್ಲಿ ನಾನು ನನ್ನ ಮೊದಲ ಅಭಿನಯ ಕಲಿತೆ, ಇದಕ್ಕೆ ಇಡೀ ತಂಡ ನನಗೆ ಪ್ರೋತ್ಸಾಹ ನೀಡಿತು ಎಂದು ಹೇಳಿದ್ದಾರೆ.

ಕುಮಾರೇಶ್ ನಿರ್ದೇಶನ ಮಲಯಾಳಿ ಕಾದಂಬರಿ ಆಧಾರಿತ ಮತ್ತೊಂದು ಕನ್ನಡ ಸಿನಿಮಾಗೆ ಸುಶ್ಮಿತಾ ಆಯ್ಕೆಯಾಗಿದ್ದಾರೆ. ನನ್ನ ಕಾಲೇಜು ಸಹಪಾಠಿಗಳು ಬೇರೆ ಬೇರೆ ರಾಜ್ಯದವರು, ಅವರ ಜೊತೆ ಕನ್ನಡ ಮಾತನಾಡಲು ಸಾಧ್ಯವಿಲ್ಲ, ಹೀಗಾಗಿ ಕನ್ನಡ ಮಾತನಾಡುವುದನ್ನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ತನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಮುಂದಿನ ಚಿತ್ರದಲ್ಲಿ ಅಭಿನಯಿಸುವುದಾಗಿ ಸುಶ್ಮಿತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com