• Tag results for ನಟಿ

ನಟಿ ಮೀರಾ ಚೋಪ್ರಾಗೆ ಆನ್ ಲೈನ್ ನಲ್ಲಿ ಬೆದರಿಕೆ: ಜ್ಯೂ.ಎನ್ ಟಿಆರ್ ಅಭಿಮಾನಿಗಳ ವಿರುದ್ಧ ದೂರು ದಾಖಲು!

ಟಾಲಿವುಡ್ ನ ಬಂಗಾರಂ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಮೀರಾ ಚೋಪ್ರಾಗೆ ಟ್ವಿಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಭಿಮಾನಿಗಳು ಬೆದರಿಕೆ ಹಾಕಿ ಅಸಭ್ಯವಾಗಿ ನಿಂದಿಸಿದ್ದು, ಕಿರುಕುಳ ನೀಡಿದವರ ವಿರುದ್ಧ ನಟಿ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ. 

published on : 3rd June 2020

ಕಿರುತೆರೆ ನಟಿ ಚಂದನಾ ವಿಷ ಸೇವಿಸಿ ಆತ್ಮಹತ್ಯೆ: ಪ್ರಿಯಕರ ಸೇರಿ ಐವರ ವಿರುದ್ಧ ಎಫ್‌ಐಆರ್‌

ರಾಜಧಾನಿ ಬೆಂಗಳೂರಿನಲ್ಲಿ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀರಿಯಲ್ ಹಾಗೂ ಜಾಹಿರಾತುಗಳಲ್ಲಿ ನಟಿಸಿದ್ದ ಚಂದನ (29) ಆತ್ಮಹತ್ಯೆ ಮಾಡಿಕೊಂಡ ನಟಿ. 

published on : 1st June 2020

ಹೋಂ ಕ್ವಾರಂಟೈನ್ ನಲ್ಲಿದ್ದ ದಕ್ಷಿಣ ಭಾರತ ಹಿರಿಯ ನಟಿ ವಾಣಿಶ್ರೀ ಪುತ್ರ ಆತ್ಮಹತ್ಯೆ!

ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಪುತ್ರ ಅಭಿನಯ್ ವೆಂಕಟೇಶ್ ಕಾರ್ತಿಕ್ (೩೬) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

published on : 23rd May 2020

ಚಿತ್ರರಂಗದ ಸಂಕಷ್ಟವನ್ನೂ ಗಮನಿಸಿ: ಮುಖ್ಯಮಂತ್ರಿಗಳಿಗೆ ನಟಿ ತಾರಾ ಪತ್ರ

ಜಗತ್ತಿನಾದ್ಯಂತ ಮಾರಣಾಂತಿಕ ಕೊರೋನಾ ವೈರಾಣು ತಾಂಡವವಾಡುತ್ತಿದ್ದು, ಕರ್ನಾಟಕ ರಾಜ್ಯವೂ ಸಹ ಪೀಡನೆಯಿಂದ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ಕೋರಿ ಸರ್ಕಾರದ ಮೊರೆ ಹೊಕ್ಕಿದೆ. ಈ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಬಿಜೆಪಿ ನಾಯಕಿ,ನಟಿ  ತಾರಾ ಅನುರಾಧ, ಚಿತ್ರರಂಗಕ್ಕೂ ಸಹಾ

published on : 14th May 2020

ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ರಣ ವಿಕ್ರಮನ ಬೆಡಗಿ ಅದಾ ಶರ್ಮಾ ಹೇಳಿದ್ದೇನು?

ಕಾಸ್ಟಿಂಗ್ ಕೌಚ್‌ ಕಳೆದೆರಡು ವರ್ಷಗಳ ಹಿಂದೆ ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಷಯವಾಗಿತ್ತು. ಚಂದನವನ ಸೇರಿದಂತೆ ಬಾಲಿವುಡ್, ಟಾಲಿವುಡ್‌, ಕಾಲಿವುಡ್‌ ಹಾಗೂ ಮಾಲಿವುಡ್‌ ಅಲ್ಲದೇ ಹಾಲಿವುಡ್‌ ನಟಿಯರು ಕೂಡ ಕಾಸ್ಟಿಂಗ್ ಕೌಚ್ ಕುರಿತಂತೆ ತಮ್ಮ ಅನುಭವಗಳನ್ನು ಹೇಳಿದ್ದಾರೆ.

published on : 8th May 2020

ಸುಳ್ಳು ಸುದ್ದಿ ನಂಬಬೇಡಿ, ಕೊರೋನಾ ಅಲ್ಲ, ನನಗೆ ಬಂದಿರುವುದು ಮಲೇರಿಯಾ: ನಟಿ ಪಾಯಲ್ ಘೋಷ್

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಪಾಯಲ್ ಘೋಷ್ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಇದನ್ನು ನೋಡಿದವರು ಪಾಯಲ್‌ಗೆ ಕೊರೊನಾ ಸೋಂಕು ಬಂದಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ.

published on : 3rd May 2020

ನಟಿ ತೇಜಸ್ವಿನಿ ಪ್ರಕಾಶ್ ಗೆ ಪಿತೃ ವಿಯೋಗ

ಕನ್ನಡದ ಪ್ರಸಿದ್ದ ನಟಿಯರಲ್ಲಿ ಒಬ್ಬರಾದ ತೇಜಸ್ವಿನಿ ಪ್ರಕಾಶ್ ಅವರ ತಂದೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

published on : 24th April 2020

ಕೊರೋನಾ ಯೋಧರಿಗಾಗಿ 10 ಸಾವಿರ ಮಾಸ್ಕ್ ತಯಾರಿಸಿ ಮಾದರಿಯಾದ ನಟಿ ಅಮೂಲ್ಯ ದಂಪತಿ 

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ತಾವೆಂದಿಗೂ ಸಮಾಜ ಸೇವೆಗೆ ಮುಂದೆಂದು ಸಾಬೀತು ಪಡಿಸುತ್ತಾ ಬಂದಿದ್ದಾರೆ. ದೇಶಾದ್ಯಂತ ಕೊರೋನಾ ಹಾವಳಿ ಇರುವ ಈ ದಿನಗಳಲ್ಲಿ ಸಹ ದಂಪತಿಗಳು ವೈದ್ಯರು ಹಾಗೂ ಪೊಲೀಸರಿಗಾಗಿ 10 ಸಾವಿರ ಮಾಸ್ಕ್‌ ತಯಾರಿಸಲು ಮುಂದಾಗಿದ್ದಾರೆ.

published on : 22nd April 2020

ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೋನಾಗೆ ಬಲಿ

ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೊನಾದಿಂದ ಮೃತಪಟ್ಟಿದ್ದಾರೆ. 74 ವರ್ಷ ಈ ನಟಿ ಮಾರಕ ವೈರಸ್‌ಗೆ ಬಲಿಯಾಗಿದ್ದಾರೆ. 'ವಿಚ್ ಫಿಂಡರ್ ಜನರಲ್' ಹಾರರ್ ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು.

published on : 11th April 2020

ಹೈದರಾಬಾದ್: ನೇಣು ಬಿಗಿದ ಸ್ಧತಿಯಲ್ಲಿ ತೆಲುಗು ಧಾರಾವಾಹಿ ನಟಿ ಶವ ಪತ್ತೆ

32 ವರ್ಷದ ಧಾರಾವಾಹಿ ನಟಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ. ಶಾಂತಿ ಎಂಬುವರ ಶವ ಅವರ ಅಪಾರ್ಟ್ ಮೆಂಟ್ ನ  ಫ್ಲಾಟ್ ನ ಬೆಡ್ ಮೇಲೆ ಪತ್ತೆಯಾಗಿದೆ. ನೆರೆಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

published on : 10th April 2020

ಕನಿಕಾ ಕಪೂರ್ ನಂತರ ಮತ್ತೊಬ್ಬ ಬಾಲಿವುಡ್ ನಟಿಗೆ ಕೊರೋನಾ ಸೋಂಕು

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ಇದೀಗ ಬಾಲಿವುಡ್‌ನ ಖ್ಯಾತ ನಟಿಯೊಬ್ಬರಿಗೂ ಕೊರೊನಾ ವೈರಸ್‌ ತಗುಲಿದೆ.

published on : 7th April 2020

ಲಾಕ್ ಡೌನ್ ವೇಳೆ ಜಾಲಿ ರೈಡ್ ಅಪಘಾತ: ಪರಾರಿಯಾಗಿದ್ದ ನಟಿ ಶರ್ಮಿಳಾ ಮಾಂಡ್ರೆ ಹೇಳಿದ್ದೇನು?

ತಾವು ಯಾವುದೇ ಪಾರ್ಟಿ ಮಾಡಲು ಲಾಕ್‌ಡೌನ್‌ ಸಂದರ್ಭದಲ್ಲಿ ಹೊರಗೆ ಹೋಗಿರಲಿಲ್ಲ, ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿಗಾಗಿ  ಮನೆಯಿಂದ ಸ್ನೇಹಿತರ ಕಾರಿನಲ್ಲಿ ಹೋಗಿದ್ದೆ ಎಂದು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸ್ಯಾಂಡಲ್‌ವುಡ್‌ ನಟಿ  ಶರ್ಮಿಳಾ ಮಾಂಡ್ರೆ ಸ್ಪಷ್ಟಪಡಿಸಿದ್ದಾರೆ.

published on : 5th April 2020

ಲಾಕ್'ಡೌನ್ ನಡುವೆಯೂ ಜಾಲಿ ರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ; ವಾಹನ ವಶ, ನಟಿಗಾಗಿ ಶೋಧ

ಲಾಕ್‌ಡೌನ್‌ ಉಲ್ಲಂಘಿಸಿ ಜಾಲಿರೈಡ್‌ಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಸೇರಿ ಇಬ್ಬರು ಇದ್ದ ಕಾರು ಅಪಘಾತಕ್ಕೀಡಾಗಿ ನಟಿ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

published on : 4th April 2020

60ರ ದಶಕದ ಬೊಗಸೆ ಕಂಗಳ ಚೆಲುವೆ ನಟಿ ನಿಮ್ಮಿ ವಿಧಿವಶ

ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ  ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

published on : 26th March 2020

ಪ್ರಸಿದ್ಧ ಹಾಲಿವುಡ್ ನಾಯಕಿ ಸೋಫಿಯಾ ಮೈಲ್ಸ್  ತಂದೆ ಕೊರೋನಾ ವೈರಸ್ ಗೆ ಬಲಿ

ಪ್ರಸಿದ್ಧ ಹಾಲಿವುಡ್ ನಾಯಕಿ ಸೋಫಿಯಾ ಮೈಲ್ಸ್ ತಂದೆ ಪೀಟರ್ ಮೈಲ್ಸ್ (೬೭) ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

published on : 23rd March 2020
1 2 3 4 5 >