'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಪ್ರಧಾನಿ ನರೇಂದ್ರ ಮೋದಿಯವರ 'ಆಕ್ಷೇಪಾರ್ಹ' ಪೋಸ್ಟರ್‌ ಪ್ರದರ್ಶಿಸಿದ್ದಕ್ಕೆ ಕೋಲ್ಕತ್ತಾ ಹೈಕೋರ್ಟ್ ಅಸಹ್ಯಕರ ಎಂದು ಹೇಳಿದೆ.
Actor Sreelekha Mitra
ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ
Updated on

ಕೋಲ್ಕತ್ತಾ: ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಪ್ರಧಾನಿ ನರೇಂದ್ರ ಮೋದಿಯವರ 'ಆಕ್ಷೇಪಾರ್ಹ' ಪೋಸ್ಟರ್‌ ಪ್ರದರ್ಶಿಸಿದ್ದಕ್ಕೆ ಕೋಲ್ಕತ್ತಾ ಹೈಕೋರ್ಟ್ ಅಸಹ್ಯಕರ ಎಂದು ಹೇಳಿದೆ. ಆದಾಗ್ಯೂ, ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನ್ಯಾಯಾಲಯವು ನಟಿಗೆ ಬಂಧನದಿಂದ ರಕ್ಷಣೆ ನೀಡಿದೆ.

ಜುಲೈ 24 ರಂದು ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಪ್ರತಿಭಟಿಸಲು ಹಲವಾರು ಜನರು ಕೋಲ್ಕತ್ತಾದ ಬೀದಿಗಳಿಗೆ ಇಳಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಶ್ರೀಲೇಖಾ ಕೇಂದ್ರ ಕೋಲ್ಕತ್ತಾದ ಎಸ್ಪ್ಲನೇಡ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಪೋಸ್ಟರ್ ಹಿಡಿದು ಫೋಟೋಗೆ ಪೋಸ್ ನೀಡಿದರು. ಈ ಪೋಸ್ಟರ್‌ ವಿರುದ್ಧ ಬಿಜೆಪಿ ಹಾಗೂ ಹಲವಾರು ಜಿಲ್ಲೆಗಳಲ್ಲಿ ನಟಿಯ ವಿರುದ್ಧ ದೂರುಗಳು ದಾಖಲಾಗಿದ್ದವು.

ಎಫ್‌ಐಆರ್ ರದ್ದುಗೊಳಿಸುವಂತೆ ಮಿತ್ರಾ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ, ಕಾರ್ಟೂನ್‌ನ ಸ್ವರೂಪದಿಂದ ನ್ಯಾಯಾಲಯದ ಆತ್ಮಸಾಕ್ಷಿಗೆ ನೋವುಂಟಾಗಿದೆ. ಹೈಕೋರ್ಟ್ ನ್ಯಾಯಾಧೀಶರು ನಟಿಯ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರನ್ನು, ಪ್ರಧಾನಿಯವರ ಇಂತಹ "ಆಕ್ಷೇಪಾರ್ಹ" ವ್ಯಂಗ್ಯಚಿತ್ರವನ್ನು ಏಕೆ ಪ್ರದರ್ಶಿಸಿದ್ದೀರಿ ಎಂದು ಕೇಳಿದರು.

Actor Sreelekha Mitra
Hanuman Ansh: ಥಿಯೇಟರ್ ಗಳಲ್ಲಿ ಭಕ್ತಿಯ ಅಲೆ, ಚಪ್ಪಲ್ಲಿ ಬಿಚ್ಚಿಟ್ಟು, ಹನುಮಾನ್ ಚಾಲೀಸಾ ಪಠಿಸಿದ ಪ್ರೇಕ್ಷಕರು! Video ವೈರಲ್

ಪೋಸ್ಟರ್ ನಿಜಕ್ಕೂ ಆಕ್ಷೇಪಾರ್ಹವಾಗಿದೆ ಎಂದು ಮಿತ್ರಾ ಅವರ ವಕೀಲರು ಒಪ್ಪಿಕೊಂಡರು. ಆದರೆ ಕಾನೂನಿನ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗುವುದಿಲ್ಲ. ಮಿತ್ರಾ ವಿರುದ್ಧ ಬಾಕಿ ಇರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಗುರುವಾರದೊಳಗೆ ಕೋಲ್ಕತ್ತಾದ ಆನಂದಪುರ ಪೊಲೀಸ್ ಠಾಣೆಯಿಂದ ಕ್ರೋಢೀಕರಿಸಿ ತನಿಖೆ ನಡೆಸಬೇಕೆಂದು ನ್ಯಾಯಾಲಯ ನಿರ್ದೇಶಿಸಿತು. ನ್ಯಾಯಾಲಯದ ಅನುಮತಿಯಿಲ್ಲದೆ ಡಿಸೆಂಬರ್ 24 ರವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಹೇಳಿದರು. ಮಿತ್ರಾ ತನಿಖೆಗೆ ಸಹಕರಿಸಿದರೆ ಮಾತ್ರ ಈ ರಕ್ಷಣೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಅಧಿಕಾರಿಯ ಮುಂದೆ ಹಾಜರಾಗಲು ಮಿತ್ರಾಗೆ 48 ಗಂಟೆಗಳ ನೋಟಿಸ್ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಮುಂದಿನ ವಿಚಾರಣೆಯ ದಿನಾಂಕವಾದ ಡಿಸೆಂಬರ್ 14 ರೊಳಗೆ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com