

ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ತನು ವೆಡ್ಸ್ ಮನು ಚಿತ್ರದ ಯಶಸ್ಸಿನ ನಂತರ, ಚಲನಚಿತ್ರ ನಿರ್ದೇಶಕನೊಬ್ಬ ತಮ್ಮನ್ನು ಒಂಟಿಯಾಗಿ ಪ್ರಣಯ ದೃಶ್ಯವನ್ನು ಅಭ್ಯಾಸ ಮಾಡಲು ಕೇಳಿಕೊಂಡಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ.
ಸ್ವರಾ ಭಾಸ್ಕರ್ ಪ್ರಸ್ತುತ ರೈಸ್ ಅಂಡ್ ಫಾಲ್ 2ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಒಂದು ರಾತ್ರಿ ತನ್ನ ಕೋಣೆಯ ಬಾಗಿಲಿಗೆ ಬಂದ ನಿರ್ದೇಶಕರೊಬ್ಬರು ನಿನ್ನನ್ನು ತಬ್ಬಿಕೊಳ್ಳಬೇಕು ಎಂದು ಕೇಳಿದರು. ಅಂದ ನಾನು ಭಯಭೀತಳಾದೆ ಎಂದು ಸ್ವರಾ ಭಾಸ್ಕರ್ ಬಹಿರಂಗಪಡಿಸಿದ್ದಾರೆ.
"ರೈಸ್ ಅಂಡ್ ಫಾಲ್ ಸೀಸನ್ 2" ರಿಯಾಲಿಟಿ ಶೋನಲ್ಲಿ ನಡೆದ ಸಂಭಾಷಣೆಯ ಸಮಯದಲ್ಲಿ ಸ್ವರಾ ಈ ವಿಷಯವನ್ನು ಬಹಿರಂಗಪಡಿಸಿದರು. ಚಿತ್ರದ ಚಿತ್ರೀಕರಣ 56 ದಿನಗಳ ಕಾಲ ನಡೆಯಿತು. ನಿರ್ದೇಶಕನು ತನ್ನ ಬಗ್ಗೆ ಅತಿಯಾದ ಆಸಕ್ತಿ ತೋರಿಸಲು ಪ್ರಾರಂಭಿಸಿದರು. ನನ್ನನ್ು ಒಂಟಿಯಾಗಿ ಭೇಟಿಯಾಗಲು ಅಥವಾ ಮಾತನಾಡಲು ಪದೇ ಪದೇ ಪ್ರಯತ್ನಿಸಿದರು ಎಂದು ಹೇಳಿದರು.
ತಮ್ಮ ಚಿತ್ರದಲ್ಲಿ ಒಂದು ಪ್ರೇಮ ದೃಶ್ಯವಿದೆ. ಸ್ವಲ್ಪ ಪ್ರಣಯ ಅಂಶವಿರುವ ಹಾಡು ಇದು ಎಂದು ನಿರ್ದೇಶಕರು ವಿವರಿಸಿದರು. ಈ ದೃಶ್ಯಗಳನ್ನು ಪೂರ್ವಾಭ್ಯಾಸ ಮಾಡಬೇಕು ಎಂದು ಹೇಳಿದರು. ದೃಶ್ಯದಲ್ಲಿ ಯಾರೆಲ್ಲಾ ಇದ್ದಾರೆ ಎಂದು ನಾನು ಕೇಳಿದೆ. ಅದಕ್ಕೆ ಅವರ ಪ್ರಸ್ತುತ ನಾವಿಬ್ಬರೆ ರಿಹರ್ಸಲ್ ಮಾಡೋಣ ಅಂತ ಹೇಳಿದರು. ಅದಕ್ಕೆ ನಾನು ಇಲ್ಲ. ನೀವು ನಟರು ಮತ್ತು ಕ್ಯಾಮೆರಾಮ್ಯಾನ್ ನನ್ನು ಕರೆಸಿ ಆ ಮೇಲೆ ರಿಹರ್ಸಲ್ ಮಾಡೋಣ ಅಂತ ಹೇಳಿದೆ. ಆ ಸಮಯದಲ್ಲಿ ತಾನು 20ರ ಹರೆಯದವಳಾಗಿದ್ದೆ ಎಂದು ಸ್ವರಾ ಹೇಳಿದ್ದರು.
ಆ ರಾತ್ರಿ ನಿರ್ದೇಶಕರು ಬಂದು ತನ್ನ ಕೋಣೆಯ ಬಾಗಿಲು ತಟ್ಟಿದಾಗ ಪರಿಸ್ಥಿತಿ ಇನ್ನಷ್ಟು ಅಹಿತಕರವಾಯಿತು ಎಂದು ಸ್ವರಾ ವಿವರಿಸಿದರು. ನಾನು ಬಾಗಿಲು ತೆರೆದಾಗ, ಆತ ನಿನ್ನನ್ನು ತಬ್ಬಿಕೊಳ್ಳಬಹುದೇ ಎಂದು ಕೇಳಿದನು. ಇದನ್ನು ನಾನು ಸ್ಪಷ್ಟವಾಗಿ ನಿರಾಕರಿಸಿದೆ ಎಂದು ಹೇಳಿದರು.