ಉತ್ತರ ಭಾರತದಲ್ಲಿ 1000 ಕ್ಕೂ ಹೆಚ್ಚಿನ ತೆರೆಗಳಲ್ಲಿ 'ಕಬಾಲಿ' ಬಿಡುಗಡೆ
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನೆಮಾ 'ಕಬಾಲಿ' ಜ್ವರ ದಿನೇದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಭಾರತವನ್ನು ಹೊರತುಪಡಿಸಿ ಇನ್ನುಳಿದೆಡೆ ಭಾರತದಾದ್ಯಂತ ಈ ಸಿನೆಮಾವನ್ನು
ನವದೆಹಲಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನೆಮಾ 'ಕಬಾಲಿ' ಜ್ವರ ದಿನೇದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಭಾರತವನ್ನು ಹೊರತುಪಡಿಸಿ ಇನ್ನುಳಿದೆಡೆ ಭಾರತದಾದ್ಯಂತ ಈ ಸಿನೆಮಾವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ವಿತರಿಸಲಿದ್ದು ಉತ್ತರ ಭಾರದಲ್ಲೇ 1000 ಕ್ಕೂ ಹೆಚ್ಚು ತೆರೆಗಳ ಮೇಲೆ ಪ್ರದರ್ಶನಗೊಳ್ಳಲಿದೆ. ಸಿನೆಮಾ ಜುಲೈ 22 ಕ್ಕೆ ಬಿಡುಗಡೆಯಾಗಲಿದೆ.
ಈ ಸಿನೆಮಾ ತಮಿಳಿನಲ್ಲಿ ನಿರ್ಮಾಣವಾಗಿದ್ದರು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಡಬ್ ಆಗಿದ್ದು, ಸಬ್ ಟೈಟಲ್ಸ್ ನೊಂದಿಗೆ ಬಿಡುಗಡೆಯಾಗುತ್ತಿರುವುದರಿಂದ ದೇಶದಾದ್ಯಂತ ಸಿನೆ ರಸಿಕರಲ್ಲಿ ತವಕ ಹೆಚ್ಚಿಸಿದೆ.
"ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಸಿನೆಮಾದೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಗೌರವವಿದೆ. ಇಡೀ ದೇಶದಾದ್ಯಂತ ಸಿನೆಮಾ ಬಗ್ಗೆ ಅಪಾರ ಕುತೂಹಲವಿದೆ. ದಕ್ಷಿಣ ಭಾರತ ಮಾರುಕಟ್ಟೆಯನ್ನು ಹೊರತುಪಡಿಸಿ ಭಾರತದಾದ್ಯಂತ ಇದನ್ನು ಬಿಡುಗಡೆ ಮಾಡಲು ನಾವು ತೀವ್ರ ಉತ್ಸುಕರಾಗಿದ್ದೇವೆ" ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಸಿಇಒ ವಿಜಯ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾವು ಉದ್ದಗಲಕ್ಕೆ ಸಿನೆಮಾ ಬಿಡುಗಡೆ ಮಾಡುತ್ತಿರುವುದರಿಂದ ಅಭಿಮಾನಿಗಳಿಗೆ ನಿರಾಸೆಯಾಗುವುದಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.