
ನವ ಪ್ರತಿಭೆಗಳಿಗೆ ನಿರ್ದೇಶಕ ಮಹೇಶ್ ಬಾಬು ಗಾಡ್ ಫಾದರ್ ಆಗಿದ್ದಾರೆ. ಹೌದು ತಾವು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಹೆಚ್ಚಾಗಿ ಯುವ ನಟ-ನಟಿಯರಿಗೆ ಅವಕಾಶ ನೀಡಿದ್ದಾರೆ.
ಸಹ ನಿರ್ದೇಶಕರಾಗಿದ್ದಾಗ ಮಹೇಶ್ ಬಾಬು ಅವರು ರಮ್ಯಾ ಮತ್ತು ರಕ್ಷಿತಾಗೆ ಬ್ರೇಕ್ ನೀಡಿದ್ದರು. ಬಳಿಕ ಸ್ವತಂತ್ರ ನಿರ್ದೇಶಕರಾದ ಬಳಿಕ ಐಂದ್ರಿತಾ ರೈ, ಕೃತಿ ಕರಬಂಧ ಮತ್ತು ನಿಕ್ಕಿ ಗರ್ಲಾನಿ ಹೀಗೆ ಹಲವರಿಗೆ ಅವಕಾಶ ನೀಡಿ ಅವರ ಸಿನಿಮಾ ವೃತ್ತಿ ಜೀವನಕ್ಕೆ ಭದ್ರ ಅಡಿಪಾಯ ಆಗಿದ್ದಾರೆ.
ಇದೀಗ ಮಹೇಶ್ ಬಾಬು ನಿರ್ದೇಶಿಸಿರುವ ಕ್ರೇಜಿ ಬಾಯ್ ಮೂಲಕ ನವ ನಾಯಕ ದಿಲೀಪ್ ಪ್ರಕಾಶ್ ಹಾಗೂ ಆಶಿಕ ರಂಗನಾಥ್ ರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕ್ರೇಜಿ ಬಾಯ್ ಚಿತ್ರದ ಆಡಿಯೋ ಲಾಂಚ್ ಆಗಿದೆ. ತಮ್ಮ ಚಿತ್ರದ ಕುರಿತು ಮಾತನಾಡಿದ ಮಹೇಶ್ ಬಾಬು ಅವರು, ಚಿತ್ರದಲ್ಲಿ ದಿಲೀಪ್ ಪ್ರಕಾಶ್ ಹಾಗೂ ಆಶಿಕ ರಂಗನಾಥ್ ನವಪ್ರತಿಭೆಗಳು ನಟಿಸುತ್ತಿದ್ದಾರೆ. ನಾನು ಹೊಸಬರಿಗೆ ಅವಕಾಶ ಕೊಡುವಾಗ ದೊಡ್ಡ ದೊಡ್ಡ ಸಂಭಾಷಣೆ ಅಥವಾ ಅಳುವಂತ, ನಗುವಂತ ಸಾಮಾನ್ಯ ಪರೀಕ್ಷೆಗಳನ್ನು ಮಾಡುವುದಿಲ್ಲ. ಬದಲಿಗೆ ಫೋಟೋಶೂಟ್ ಮೂಲಕ ಪ್ರತಿಭೆಗಳನ್ನು ಆರಿಸುತ್ತೇನೆ ಎಂದು ಹೇಳಿದ್ದಾರೆ.
ಹೆಚ್ಚಾಗಿ ನವಪ್ರತಿಭೆಗಳಿಗೆ ಗಾಡ್ ಫಾದರ್ ಇರುವುದಿಲ್ಲ. ಹೀಗಾಗಿ ಹೊಸಬರು ತಮ್ಮ ಹೆಚ್ಚು ಪರಿಶ್ರಮವಹಿಸಿ ಪಾತ್ರ ನಿರ್ವಹಿಸುತ್ತಾರೆ ಎಂದು ಮಹೇಶ್ ಬಾಬು ಹೇಳಿದ್ದಾರೆ. ಇನ್ನು ಕ್ರೇಜಿ ಬಾಯ್ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ರವಿವರ್ಮ ಸಾಹಸ ಹಾಗೂ ಶೇಖರ ಚಂದ್ರ ಸಿನಿಮಾಟೋಗ್ರಫಿ ಇದೆ. ಚಿತ್ರ ಆಗಸ್ಟ್ ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.
Advertisement