ಕೋಟಿಗೊಬ್ಬ-2 ಸಿನೆಮಾದಲ್ಲಿ ನಟ ಸುದೀಪ್
ಸಿನಿಮಾ ಸುದ್ದಿ
ಸುದೀಪ್ ಸಿನೆಮಾಗೆ ಸಂಗೀತ ನೀಡುವುದು ಡಬಲ್ ಕೆಲಸವಾಗಿತ್ತು: ಇಮ್ಮಾನ್
ಸುಮಾರು 65 ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನಿರ್ದೇಶಿಸಿರುವ ಇಮ್ಮಾಮ್ ಡಿ ಮೊದಲ ಬಾರಿಗೆ ಕನ್ನಡ ಸಿನೆಮಾ ಕೋಟಿಗೊಬ್ಬ-2ಕ್ಕೆ ಸಂಗೀತ ನೀಡಿದ್ದಾರೆ. ಸುದೀಪ್ ನಟಿಸಿರುವ
ಬೆಂಗಳೂರು: ಸುಮಾರು 65 ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನಿರ್ದೇಶಿಸಿರುವ ಇಮ್ಮಾಮ್ ಡಿ ಮೊದಲ ಬಾರಿಗೆ ಕನ್ನಡ ಸಿನೆಮಾ ಕೋಟಿಗೊಬ್ಬ-2ಕ್ಕೆ ಸಂಗೀತ ನೀಡಿದ್ದಾರೆ. ಸುದೀಪ್ ನಟಿಸಿರುವ ದ್ವಿಭಾಷಾ ಚಿತ್ರ ತಮಿಳಿನಲ್ಲಿ 'ಮುದಿಂಜ ಇವನ ಪುಡಿ' ಹೆಸರಿನಲ್ಲಿ ಬಿಡುಗಡೆಯಾಗಲಿದೆ.
"ಎರಡೂ ಬಾಷೆಗಳಿಗೆ ಸಂಗೀತ ನೀಡುವುದಕ್ಕೆ ನಿರ್ದೇಶಕ ಕೆ ಎಸ್ ರವಿಕುಮಾರ್ ನನ್ನನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಸಂತಸವಿದೆ" ಎನ್ನುತ್ತಾರೆ ಇಮ್ಮಾನ್.
ಸುದೀಪ್ ನಟನೆಯ ಒಂದೆರಡು ಸಿನೆಮಾ ಮತ್ತು ಅವರ ಒಂದಷ್ಟು ಹಾಡುಗಳನ್ನು ನೋಡುವ ಮೂಲಕ ಕೋಟಿಗೊಬ್ಬ-2 ಸಿನೆಮಾ ಸಂಗೀತಕ್ಕೆ ಸಿದ್ಧತೆ ಮಾಡಿಕೊಂಡರಂತೆ ಇಮ್ಮಾನ್. "ನಾನು ನಿರ್ಧಿಷ್ಟ ಸ್ಟಾರ್ ಗಾಗಿ ಸಂಗೀತ ಮಾಡುವುದಿಲ್ಲ. ಅದು ಸೃಜನಶೀಯತೆಗೆ ತಡೆಯೊಡ್ಡುತ್ತದೆ. ನನಗೆ ನಿರ್ದೇಶಕ ಮೊದಲ ಪ್ರೇಕ್ಷಕ ಮತ್ತು ಸ್ಕ್ರಿಪ್ಟ್ ಗೆ ತಕ್ಕಂತೆ ಸಂಗೀತ ಮಾಡುವುದು ನನ್ನ ರೂಢಿ" ಎನ್ನುತ್ತಾರೆ.
ರವಿಕುಮಾರ್ ಜೊತೆಗೆ ಹಲವಾರು ಬಾರಿ ಚರ್ಚಿಸಿದ ನಂತರ ಪಾತ್ರ ವಿನ್ಯಾಸದ ಮೇಲೆ ಹಿಡಿತ ಸಿಕ್ಕಿ ಅದಕ್ಕೆ ತಕ್ಕಂತೆ ಸಂಗೀತ ನಿರ್ದೇಶಿಸಿದ್ದಾಗಿ ಹೇಳುವ ಇಮ್ಮಾನ್, ಕನ್ನಡ ಮತ್ತು ತಮಿಳು ಸಂಭಾಷಣೆಗೆ ಹೊಂದುವಂತಹ ಸಂಗೀತ ಸಂಯೋಜಿಸುವುದು ತ್ರಾಸದಾಯಕ ಕೆಲಸವಾಗಿತ್ತು ಎನ್ನುತ್ತಾರೆ, "ಎರಡು ಭಾಷೆಗಳಿಗೆ ದೃಶ್ಯಗಳನ್ನು ಸಮಾನಾಂತರವಾಗಿ ಚಿತ್ರೀಕರಣ ಮಾಡಲಾಗುತ್ತಿತ್ತು. ಎಲ್ಲ ದೃಶ್ಯಗಳನ್ನು ಎರಡೆರಡು ಬಾರಿಗೆ ನಟಿಸಲಾಗುತ್ತಿತ್ತು" ಎಂದು ಹೇಳುವ ಅವರು ಎರಡು ಭಾಷೆಯ ಪದಗಳ ಉದ್ದ ಬದಲಾಗುವುದರಿಂದ ಇದು ಡಬಲ್ ಕೆಲಸ ಹಿಡಿಯಿತು ಎನ್ನುತ್ತಾರೆ.
ಗೀತಸಾಹಿತಿ ನಾಗೇಂದ್ರ ಪ್ರಸಾದ್ ಈ ನಿಟ್ಟಿನಲ್ಲಿ ತಮಗೆ ಸಹಾಯ ಮಾಡಿದ್ದನ್ನು ನೆನಪಿಸಿಕೊಳ್ಳುವ ಇಮ್ಮಾನ್ "ಅವರಿಗೆ ತಮಿಳು ಗೊತ್ತಿರುವುದರಿಂದ ನನಗೆ ನಿರಂತರವಾಗಿ ಅವರ ಜೊತೆ ಸಂವಹನ ಸಾಧ್ಯವಾಯಿತು" ಎನ್ನುತ್ತಾರೆ.
ಕೋಟಿಗೊಬ್ಬ-2 ಸಿನೆಮಾದ ಆಡಿಯೋವನ್ನು ಆನಂದ್ ಆಡಿಯೋ ಸಂಸ್ಥೆ ಇದು ಬಿಡುಗಡೆ ಮಾಡಲಿದೆ. ಸೂರಪ್ಪ ಬಾಬು ಇದನ್ನು ನಿರ್ಮಿಸಿದ್ದು, ನಿತ್ಯ ಮೆನನ್ ಸುದೀಪ್ ಎದುರು ನಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ