
ದಕ್ಷಿಣ ಭಾರತದ ನಾಲ್ಕು ಭಾಷೆಗೂ ಮರಾಠಿಯ ಯಶಸ್ವಿ ಸೈರಾಟ್ ಚಿತ್ರದ ರಿಮೇಕ್ ಹಕ್ಕುಗಳನ್ನು ರಾಕ್ಲೈನ್ ವೆಂಕಟೇಶ್ ಪಡೆದುಕೊಂಡಿದ್ದು, ಚಿತ್ರವನ್ನು ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶಿಸುತ್ತಿರುವುದು ಗೊತ್ತಿರುವ ಸಂಗತಿ. ಆದರೆ ಕನ್ನಡ ಸೈರಾಟ್ ಚಿತ್ರಕ್ಕೂ ಮೂಲ ಮರಾಠಿ ಚಿತ್ರದಲ್ಲಿ ಅಭಿನಯಿಸಿದ್ದ ರಿಂಕು ರಾಜ್ ಗುರು ಅವರನ್ನೇ ಕರೆ ತರಲು ನಿರ್ಮಾಪಕ ಹಾಗೂ ನಿರ್ದೇಶಕರು ತೀರ್ಮಾನಿಸಿದ್ದಾರಂತೆ.
ಚಿತ್ರದ ಪ್ರತಿ ಪಾತ್ರಕ್ಕೂ ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದ ನಿರ್ದೇಶಕರು, ಇದಕ್ಕಾಗಿ ಸರಿಸುಮಾರು 2 ಸಾವಿರಕ್ಕೂ ಹೆಚ್ಚು ಯುವಕ ಹಾಗೂ ಯುವತಿಯರನ್ನು ಬಂದಿದ್ದು, ನಾಯಕಿಯನ್ನು ಬಿಟ್ಟು ಇನ್ನು ಉಳಿದಂತ ಪಾತ್ರಗಳ ಆಯ್ಕೆಯನ್ನು ನಿರ್ದೇಶಕರು ಮಾಡಿ ಮುಗಿಸಿದ್ದಾರೆ. ಆದರೆ ನಾಯಕಿಯನ್ನು ಮಾತ್ರ ಇನ್ನೂ ಆಯ್ಕೆ ಮಾಡಿಲ್ಲ. ಕಾರಣ ಮೂಲ ಚಿತ್ರದ ಗೆಲುವಿನಲ್ಲಿ ನಾಯಕಿಗೆ ಶೇ. 30 ಭಾಗ ಕ್ರೆಡಿಟ್ ಕೊಡಬೇಕು. ಆಕೆಯ ಸಹಜ ನಟನೆ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಅಂಥ ಮುಖವನ್ನು ಅವಕಾಶ ಕೇಳಿಕೊಂಡು ಬಂದಿದ್ದ ಎರಡು ಸಾವಿರ ಜನರಲ್ಲಿ ನನಗೆ ಕಾಣಲಿಲ್ಲ ಹೀಗಾಗಿ ಕನ್ನಡದ ಸೈರಾಟ್ ಚಿತ್ರಕ್ಕೂ ರಿಂಕು ರಾಜ್ ಗುರು ಅವರನ್ನೇ ಕರೆ ತರಲಾಗುವುದು ಎಂದು ನಿರ್ದೇಶಕ ಎಸ್ ನಾರಾಯಣ್ ತಿಳಿಸಿದ್ದಾರೆ.
ಈ ಸಂಬಂಧ ನಟಿ ರಿಂಕುವನ್ನು ಸಂರ್ಪಕಿಸಿ ಆಯ್ಕೆಯನ್ನು ಕನ್ನಡದ ಚಿತ್ರದಲ್ಲಿ ನಟಿಸುವಂತೆ ಕೋರಲಾಗಿದ್ದು, ನಟಿಯ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದು, ನಟಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಕನ್ನಡದಲ್ಲಿ ಚಿತ್ರ ಸೆಟ್ಟೇರಲಿದೆ.
ಇನ್ನು ಮೂಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಅಜಯ್-ಅತುಲ್ ಅವರನ್ನೇ ಕನ್ನಡದ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲು ಕೇಳಿದ್ದು ಅವರು ಗಾಂಧಿನಗರಕ್ಕೆ ಬರುವುದು ಖಚಿತವಾಗಿದೆ.
Advertisement