
ನವ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಎಸ್ ನಾರಾಯಣ್ ನಿಸ್ಸೀಮರು. ಅದೇ ರೀತಿ ಇದೀಗ ತಮ್ಮ ಮುಂದಿನ ಪಂಟ ಚಿತ್ರದಲ್ಲಿ ಮೋನಿಕಾ ಎಂಬ ಹೊಸ ನಾಯಕಿಯನ್ನು ಪರಿಚಯಿಸುತ್ತಿದ್ದಾರೆ.
ಆರ್ ಚಂದ್ರು ನಿರ್ದೇಶನದ ಲಕ್ಷ್ಮಣ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ರಾಜಕಾರಣಿ ಹೆಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಪಂಟ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು ಮೋನಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಪಂಟ ಚಿತ್ರವನ್ನು ಕೆ. ಸುಬ್ರಮಣ್ಯನ್ ಅವರು ನಿರ್ಮಿಸುತ್ತಿದ್ದು ಅಮೀದ್ ಕಥೆ ಬರೆದಿದ್ದಾರೆ. ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಮೋನಿಕಾ ಚಿತ್ರತಂಡವನ್ನು ಸೇರಿದ್ದಾರೆ.
Advertisement