
ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಝೆಂಡರ್ ಕೇಜ್ ಚಿತ್ರದಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.
ಈ ಸಾಹಸ ಪ್ರಧಾನ ಚಿತ್ರದಲ್ಲಿ ವಿನ್ ಡೀಸೆಲ್ ಮುಖ್ಯಭೂಮಿಕೆಯಲ್ಲಿದ್ದು, ದೀಪಿಕಾ ಪಡುಕೋಣೆ ಸೆರೆನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಟೀಸರ್ ವನ್ನು ದೀಪಿಕಾ ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಟೀಸರ್ ನಲ್ಲಿ ದೀಪಿಕಾ ಪಡುಕೋಣೆ ವಿನ್ ಡೀಸೆಲ್ ಜತೆ ಸೆಣೆಸಲಿದ್ದಾರೆ. ಇನ್ನು ಟೀಸರ್ ನಲ್ಲಿ ಚಿತ್ರದ ಟ್ರೈಲರ್ ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸಹ ಇದೆ.
Advertisement