'ಹಳ್ಳಿ ಸೊಗಡು' ಸಿನೆಮಾ ಮೂಲಕ ಕವಿ ದೊಡ್ಡರಂಗೇಗೌಡ ಅವರಿಗೆ ಗೌರವ

ಎಂ ಆರ್ ಕಪಿಲ್ ಅವರ ಸಂಗೀತಮಯ ಚಿತ್ರ 'ಹಳ್ಳಿ ಸೊಗಡು', ಕವಿ-ಸಾಹಿತಿ ಮತ್ತು ಚಿತ್ರಗೀತೆ ರಚನಕಾರ ದೊಡ್ಡರಂಗೇಗೌಡ ಕುರಿತಾದ ಚಿತ್ರವಂತೆ. ಇದರ ನಿರ್ಮಾಪಕರು ಈ ಚಿತ್ರವನ್ನು
ಕವಿ-ಸಾಹಿತಿ ಮತ್ತು ಚಿತ್ರಗೀತೆ ರಚನಕಾರ ದೊಡ್ಡರಂಗೇಗೌಡ
ಕವಿ-ಸಾಹಿತಿ ಮತ್ತು ಚಿತ್ರಗೀತೆ ರಚನಕಾರ ದೊಡ್ಡರಂಗೇಗೌಡ
ಬೆಂಗಳೂರು: ಎಂ ಆರ್ ಕಪಿಲ್ ಅವರ ಸಂಗೀತಮಯ ಚಿತ್ರ 'ಹಳ್ಳಿ ಸೊಗಡು', ಕವಿ-ಸಾಹಿತಿ ಮತ್ತು ಚಿತ್ರಗೀತೆ ರಚನಕಾರ ದೊಡ್ಡರಂಗೇಗೌಡ ಕುರಿತಾದ ಚಿತ್ರವಂತೆ. ಇದರ ನಿರ್ಮಾಪಕರು ಈ ಚಿತ್ರವನ್ನು ಕವಿಯ ಹುಟ್ಟೂರಾದ ಕುರುಬರಹಳ್ಳಿಯಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದಾರೆ. 
"ಇದು ದೊಡ್ಡರಂಗೇಗೌಡ ಅವರ 70 ನೇ ಹುಟ್ಟುಹಬ್ಬಕ್ಕೆ ಉಡುಗೊರೆ" ಎನ್ನುತ್ತಾರೆ ನಿರ್ದೇಶಕ. ಈ ಚಿತ್ರಕ್ಕೆ ಮುಖ್ಯ ಪಾತ್ರದಲ್ಲಿ ನಟಿಸಲು ಆರವ್ ಸೂರ್ಯ ಮತ್ತು ಅಕ್ಷರ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ ದೊಡ್ಡರಂಗೇಗೌಡ ಕೂಡ ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. 
"ತಮ್ಮ ಪುತ್ರ ಭರತ್ ರಂಗೇಗೌಡ ಮತ್ತು ಉದಯ್ ಲೇಖ ಅವರೊಂದಿಗೆ ದೊಡ್ಡರಂಗೇಗೌಡ ಅವರು ಗೀತರಚನೆ ಮಾಡುತ್ತಿದ್ದಾರೆ" ಎಂದು ತಿಳಿಸುತ್ತಾರೆ ನಿರ್ದೇಶಕ ಕಪಿಲ್. 
ಆಗಸ್ಟ್ 7 ರಿಂದ ಹಾಡುಗಳ ರೆಕಾರ್ಡಿಂಗ್ ಕಾರ್ಯವನ್ನು ಪ್ರಾರಂಭಿಸುವುದಾಗಿ ತಿಳಿಸುವ ನಿರ್ದೇಶಕ, ದೊಡ್ಡರಂಗೇಗೌಡ ಅವರಿಗೆ ಹಾಡನ್ನು ಸಮರ್ಪಿಸಲು ಇಡೀ ಚಿತ್ರರಂಗಕ್ಕೆ ಆಹ್ವಾನ ನೀಡಿದ್ದಾರಂತೆ."ಆ ಹಾಡನ್ನು ದೊಡ್ಡರಂಗೇಗೌಡ ಅವರ ಅಭಿಮಾನಿಗಳಾದ ನಟರು, ನಿರ್ಮಾಪಕರು, ನಿರ್ದೇಶಕರು ಮತ್ತು ಗೆಳೆಯರು ಹಾಡಲಿದ್ದಾರೆ" ಎಂದು ತಿಳಿಸುತ್ತಾರೆ ಕಪಿಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com