ಬೆಂಗಳೂರು: 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಯಶ್ ಸಿನೆಮಾ ಬಗ್ಗೆ ಹೆಚ್ಚು ತುಟಿಬಿಚ್ಚವುದಿಲ್ಲ. "ಈ ತಿಂಗಳ ಕೊನೆಗೆ ಮಾತುಕತೆಯ ಭಾಗದ ಚಿತ್ರೀಕರಣ ಸಂಪೂರ್ಣಗೊಳ್ಳುತ್ತದೆ. ಆಗಸ್ಟ್ ನಿಂದ ಹಾಡುಗಳ ಚಿತ್ರೀಕರಣ ಮತ್ತು ಅಕ್ಟೊಬರ್ ನಲ್ಲಿ ಬಿಡುಗಡೆಗೆ ಯೋಜಿಸಿದ್ದೇವೆ" ಎಂದಷ್ಟೇ ಹೇಳುತ್ತಾರೆ.