ಬ್ರೂಕ್ಲಿನ್ ಸಿನೆಮೋತ್ಸವದಲ್ಲಿ ಮರಾಠಿ ಸಿನೆಮಾ 'ಲಪಾಚ್ಚಪಿ'

ಮರಾಠಿ ಸಿನೆಮಾ 'ಲಪಾಚ್ಚಪಿ' ಅಮೆರಿಕಾದ ಬ್ರೂಕ್ಲಿನ್ ಸಿನೆಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದು, ಈ ಸಿನೆಮೋತ್ಸವ ಪ್ರಾರಂಭವಾದ ೧೯ ವರ್ಷಗಳಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ
'ಲಪಾಚ್ಚಪಿ' ಸಿನೆಮಾ ಪೋಸ್ಟರ್
'ಲಪಾಚ್ಚಪಿ' ಸಿನೆಮಾ ಪೋಸ್ಟರ್

ನ್ಯೂಯಾರ್ಕ್: ಮರಾಠಿ ಸಿನೆಮಾ 'ಲಪಾಚ್ಚಪಿ' ಅಮೆರಿಕಾದ ಬ್ರೂಕ್ಲಿನ್ ಸಿನೆಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದು, ಈ ಸಿನೆಮೋತ್ಸವ ಪ್ರಾರಂಭವಾದ ೧೯ ವರ್ಷಗಳಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಮತ್ತು ಮರಾಠಿ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜೂನ್ ೩ರಂದು ಪ್ರಾರಂಭವಾದ ೧೦ ದಿನದ ಸಿನೆಮೋತ್ಸವದಲ್ಲಿ ಒಟ್ಟು ೧೦೭ ಸಿನೆಮಾಗಳು ಪ್ರದರ್ಶನಗೊಂಡಿದ್ದವು. ಇವುಗಳಲ್ಲಿ ವಿಶಾಕ್ ಫೂರಿಯಾ ನಿರ್ದೇಶನದ 'ಲಪಾಚ್ಚಪಿ' ಭಾನುವಾರ ಪ್ರದರ್ಶನಗೊಂಡಿತ್ತು.

"ಪ್ರೇಕ್ಷಕರಿಂದ ಪ್ರತಿಕ್ರಿಯೆ ಅದ್ಭುತವಾಗಿತ್ತು. ಸರಿಯಾದ ಸಮಯದಲ್ಲಿ ಅವರು ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಅಲ್ಲಿನ ಭಾರತೀಯರಿಗಷ್ಟೇ ಅಲ್ಲ ಪ್ರಾದೇಶಿಕರಿಗೂ ಈ ಸಿನೆಮಾ ತಟ್ಟಿದೆ" ಎಂದು ಸಿನೆಮಾದ ಸಹ ನಿರ್ಮಾಪಕರಲ್ಲಿ ಒಬ್ಬರಾದ ಎಸ್ ರಾಮಚಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಮರಾಠಿ ಸಿನೆಮಾ ಆಗಿದ್ದರೂ ಇಂಗ್ಲಿಶ್ ಸಬ್ ಟೈಟಲ್ ಗಳೊಂದಿಗೆ ಸಿನೆಮಾ ಪ್ರದರ್ಶನಗೊಂಡಿದ್ದರಿಂದ ಎಲ್ಲರಿಗೂ ಅರ್ಥವಾಯಿತು" ಎಂದು ಫೂರಿಯಾ ಅನುಭವ ಹಂಚಿಕೊಂಡಿದ್ದಾರೆ.

ಈ ಹಾರರ್ ಸಿನೆಮಾದಲ್ಲಿ ಪೂಜಾ ಸಾವಂತ್, ಉಷಾ ನಾಯಕ್ ಮತ್ತು ವಿಕ್ರಮ್ ಗಾಯಕವಾಡ್ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com