ಸಿನೆಮಾದ ಭವಿಷ್ಯ ಇರುವುದೇ ಅಂತರ್ಜಾಲ ಚಲನಚಿತ್ರಗಳಲ್ಲಿ: ಕಂಗನಾ ರಣಾವತ್

ಸಿನೆಮಾದ ಭವಿಷ್ಯ ಡಿಜಿಟಲ್ ಮಾಧ್ಯಮಗಳ ಸಣ್ಣ ಚಲನಚಿತ್ರಗಳಲ್ಲೇ ಇರುವುದು ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ನಟಿ ಕಂಗನಾ ರಣಾವತ್
ನಟಿ ಕಂಗನಾ ರಣಾವತ್
ಮುಂಬೈ: ಸಿನೆಮಾದ ಭವಿಷ್ಯ ಡಿಜಿಟಲ್ ಮಾಧ್ಯಮಗಳ ಸಣ್ಣ ಚಲನಚಿತ್ರಗಳಲ್ಲೇ ಇರುವುದು ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಹೇಳಿದ್ದಾರೆ. 
ಶಿರಿಶ್ ಕುಂದರ್ ಅವರ 'ಕೃತಿ' ಸಿನೆಮಾವನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಿದ ಸಮಯದಲ್ಲಿ ಮಾತನಾಡಿದ ಕಂಗನಾ "ಸಣ್ಣ ಸಿನೆಮಾವನ್ನು ಮಾಡುವುದು ಬಹಳ ಕಷ್ಟ. ನಾನು ಕೂಡ ಒಂದು ಶಾರ್ಟ್ ಫಿಲ್ಮ್ (ದ ಟಚ್) ಮಾಡಿದ್ದೇನೆ ಮತ್ತು ಅದು ಬಹಳ ಕಷ್ಟ" ಎಂದಿದ್ದಾರೆ. 
ಎಲ್ಲವೂ ಸಣ್ಣದಾಗುತ್ತಾ ಮುಂದುವರೆದಿದೆ. ಸಿನೆಮಾದ ಭವಿಷ್ಯ ಇರುವುದೇ ಅಂತರ್ಜಾಲದಲ್ಲಿ ಎಂದು ನಂಬಿದ್ದೇನೆ. ಎರಡು ವರೆ ಘಂಟೆಯ ಸಿನೆಮಾಗಳು ಭವಿಷ್ಯದಲ್ಲಿ ಉಳಿಯುವುದಿಲ್ಲ. ಅಂತರ್ಜಾಲದಲ್ಲೇ ಸಣ್ಣ ಸಿನೆಮಾಗಳು ಜನಪ್ರಿಯವಾಗುವ ಕಾಲ ಸನ್ನಿಹಿತವಾಗುತ್ತಿದೆ" ಎಂದು ಕಂಗನಾ ಹೇಳಿದ್ದಾರೆ. 
ಮನೋಜ್ ಭಾಜಪೇಯಿ, ರಾಧಿಕಾ ಆಪ್ಟೆ ಮತ್ತು ನೇಹಾ ಶರ್ಮಾ ನಟಿಸಿರುವ 'ಕೃತಿ' ಸಿನೆಮಾವನ್ನು ಶಿರಿಶ್ ಕುಂದರ್ ನಿರ್ದೇಶಿಸಿದ್ದಾರೆ. 
"ಅಂತರ್ಜಾಲ ಅತಿ ದೊಡ್ಡ ಮಾಧ್ಯಮ. ಅಲ್ಲಿ ನಾವಿನ್ನು ಹೆಚ್ಚಿನ ಆಳಕ್ಕೆ ಇಳಿಯಬೇಕು. ದೊಡ್ಡ ಸಿನೆಮಾಗಳಲ್ಲಿ ಮಾಡಲಾಗದ ಪಾತ್ರಗಳನ್ನು, ವ್ಯಕ್ತ ಪಡಿಸಲಾಗದ ಭಾವನೆಗಳನ್ನು ಸಣ್ಣ ಸಿನೆಮಾಗಳಲ್ಲಿ ಮಾಡಲು ಸಾಧ್ಯವಿದ್ದು ಅಂತಹುವುಗಳನ್ನು ನಾನು ಪ್ರಯೋಗಿಸಲಿದ್ದೇನೆ" ಎಂದಿದ್ದಾರೆ ನಟ ಮನೋಜ್ ಬಾಜಪೇಯಿ. 
'ಕೃತಿ' ಶಾರ್ಟ್ ಫಿಲ್ಮ್ ಅನ್ನು ನೀವಿಲ್ಲಿ ನೋಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com