

ಚೆನ್ನೈ: ತೆಲುಗು ಸಿನೆಮಾ 'ಮನಮಂತಾ'ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮೊದಲ ಬಾರಿಗೆ ತೆಲುಗಿನಲ್ಲಿ ತಾವೇ ಡಬ್ ಮಾಡಿದ್ದಾರೆ.
ಶನಿವಾರ ಬಿಡುಗಡೆಯಾಗಿರುವ ಈ ಸಿನೆಮಾದ ಟೀಸರ್ ನಲ್ಲಿ ಮೋಹನ್ ಲಾಲ್ ತಮ್ಮ ಪಾತ್ರದ ಸಂಭಾಷಣೆಗೆ ತಾವೇ ಡಬ್ ಮಾಡಿರುವುದನ್ನು ನೋಡಬಹುದಾಗಿದೆ.
ರಾಷ್ಟಪ್ರಶಸ್ತಿ ವಿಜೇತ ನಿರ್ದೇಶಕ ಚಂದ್ರಶೇಖರ್ ಯೆಲೇತಿ ನಿರ್ದೇಶನದ ಈ ಸಿನೆಮಾದಲ್ಲಿ ಹಿರಿಯ ನಟಿ ಗೌತಮಿ, ಅನಿಷಾ ಅಂಬ್ರೋಸ್ ಮತ್ತು ವಿಶ್ವನಾಥ್ ದುಡುಂಪುಡ್ಡಿ ಕೂಡ ನಟಿಸಿದ್ದಾರೆ.
ಈ ಸಿನೆಮಾ ಮಲೆಯಾಳಂ ನಲ್ಲಿ 'ವಿಸ್ಮಯಂ' ಎಂಬ ಹೆಸರಿನಲ್ಲಿ ಬಿಡುಗಡೆಯಾಲಿದೆ. ಈ ಹಿಂದೆ ಮೋಹನ್ ಲಾಲ್ ಅವರು ನಟಿಸಿದ್ದ ಕನ್ನಡ ಸಿನೆಮಾಗಳಲಿಗೂ ಅವರೇ ಡಬ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಸಿನೆಮಾದ ಟ್ರೇಲರ್ ಇಲ್ಲಿ ವೀಕ್ಷಿಸಿ