ಮಾಸ್ ಲೀಡರ್ ಗೆ ಪ್ರಣಿತಾ ನಾಯಕಿ ?

ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟಿ ಪ್ರಣಿತ ಮತ್ತೆ ಪ್ರೇಕ್ಷಕರ ಮನರಂಜಿಸಲು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ...
ಪ್ರಣಿತಾ
ಪ್ರಣಿತಾ
Updated on

ಬೆಂಗಳೂರು: ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟಿ ಪ್ರಣಿತ ಮತ್ತೆ ಪ್ರೇಕ್ಷಕರ ಮನರಂಜಿಸಲು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಪ್ರಣಿತಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

ಸಹನಾ ಮೂರ್ತಿ ಚಿತ್ರ ನಿರ್ದೇಶಿಸುತ್ತಿದ್ದಾರೆ. ರೋಸ್ ನಂತರ ಮತ್ತೆ ನಿರ್ಮಾಣಕ್ಕಿಳಿದಿರುವ ಕರುಣ್ ಶಿವಪ್ಪ ಸಹನಾ ಮೂರ್ತಿ ನಿರ್ದೇಶನದ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಆದರೆ ಇದರ ಬಗ್ಗೆ ಪ್ರಣಿತಾ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ, ಚಿತ್ರಕ್ಕೆ ದಕ್ಷಿಣ ಭಾರತದ ನಾಯಕಿಯರಿಗಾಗಿ ಹುಡುಕಾಟ ನಡೆಸಿದ್ದು, ಪ್ರಣಿತಾ ಹೆಸರು ಕೇಳಿ ಬಂದಿದೆ ಎನ್ನಲಾಗಿದೆ.

ದರ್ಶನ್ ಅಭಿನಯದ ಪೊರ್ಕಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದ ಪ್ರಣಿತಾ 2015 ರಲ್ಲಿ ರಿಲೀಸ್ ಆಗಿದ್ದ ಸೆಕೆಂಡ್ ಹ್ಯಾಂಡ್ ಲವ್ ಸ್ಟೋರಿಯಲ್ಲಿ ಅಭಿನಯಿಸಿದ್ದರು. ಇದೀಗ ಮತ್ತೆ ಬ್ರೇಕ್ ತೆಗೆದುಕೊಳ್ಳಲು ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಆಗಸ್ಟ್ ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ವೀರ್ ಸಮರ್ಥ್ ಸಂಗೀತ ನೀಡಿದ್ದು, ಗುರು ಪ್ರಶಾಂತ್ ರೈ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com