'ದೊಡ್ಮನೆ ಹುಡ್ಗ' ಚಿತ್ರದ ಹಾಡಿನ ಶೂಟಿಂಗ್ ಗೆ ಅಕ್ಷರಶಃ ಅಭಿಮಾನಿಗಳೇ ದೇವ್ರು

ಅಭಿಮಾನಿಗಳೇ ನಮ್ಮ ದೇವರು ಹಾಡನ್ನು ರಾಜ್ಯದ ಐದು ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಳ್ಳಾರಿ, ಹುಬ್ಬಳ್ಳಿ, ಚಿತ್ರದುರ್ಗ,ಹೊಸಪೇಟೆ ಮತ್ತು ..
ಅಭಿಮಾನಿಗಳ ಜೊತೆ ಡ್ಯಾನ್ಸ್ ಮಾಡುತ್ತಿರುವ ಪುನೀತ್ ರಾಜ್ ಕುಮಾರ್
ಅಭಿಮಾನಿಗಳ ಜೊತೆ ಡ್ಯಾನ್ಸ್ ಮಾಡುತ್ತಿರುವ ಪುನೀತ್ ರಾಜ್ ಕುಮಾರ್

ಬೆಂಗಳೂರು: ಅಭಿಮಾನಿಗಳೇ ನಮ್ಮನೇ ದೇವರು ಹಾಡನ್ನು ರಾಜ್ಯದ ಐದು ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಳ್ಳಾರಿ, ಹುಬ್ಬಳ್ಳಿ, ಚಿತ್ರದುರ್ಗ,ಹೊಸಪೇಟೆ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗಿದೆ, ರಾಜ್ಯದ ಜನತೆಯ ಪ್ರೋತ್ಸಾಹಕ್ಕೆ ಇಡಿ ಚಿತ್ರತಂಡ ಅಭಿನಂದನೆ ಸಲ್ಲಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮೆನೆ ಹುಡ್ಗ ಚಿತ್ರದ ಆರಂಭಿಕ ಹಾಡಿನ ಚಿತ್ರೀಕರಣದಲ್ಲಿ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿದ್ದರು

ನಾವು ಸಾವಿರ ಲೆಕ್ಕದಲ್ಲಿ ಜನರು ಬರುತ್ತಾರೆ ಎಂದು ಎಣಿಸಿದ್ದೋ, ಆದರೆ ಶೂಟಿಂಗ್ ಗೆ ಲಕ್ಷಗಟ್ಟಲೆ ಅಭಿಮಾನಿಗಳು ಬಂದು ಭಾಗವಹಿಸಿದ್ದರು. ದೊಡ್ಮನೆ ಹುಡ್ಗ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡ ಚಿತ್ರ ತಂಡ, ನೃತ್ಯ ನಿರ್ದೇಶಕ ಹರ್ಷ ಹಾಗೂ ನಾಯಕ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ರಾಜ್ಯದ ಜನತೆಗೆ ನಿರ್ದೇಶಕ ಸೂರಿ ಧನ್ಯವಾದ ಅರ್ಪಿಸಿದ್ದಾರೆ.

ಸಾರ್ವಜನಿಕರ ಜೊತೆ ಹಾಡೊಂದರ ಚಿತ್ರೀಕರಣ ಮಾಡಬೇಕೆಂಬ ಸಣ್ಣ ಆಸೆಯಿತ್ತು, ಆದರೆ ಆ ಕನಸು ದೊಡ್ಡ ಮಟ್ಟದಲ್ಲಿ ನೆರವೇರಿದೆ, ಇದಕ್ಕೆ ಅಭಿಮಾನಿಗಳೇ ಕಾರಣ, ರಾಜಕಾರಣಿಗಳು ಹಾಗೂ ಪೊಲೀಸರ ಸಹಕಾರ ಇಲ್ಲದೇ ಇದ್ದರೇ ನವಮೆಗ ಈ ಮಟ್ಟಿನಲ್ಲಿ ಚಿತ್ರೀಕರಣ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಪುನೀತ್ ರಾಜ್ ಕುಮಾರ್ ಅವರನ್ನ ಕನ್ನಡ ನಾಡಿನ ಜನತೆ ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಸೂರಿ ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಮಾಡುವಾಗ ಅಲ್ಲಿನ ಹಲವು ಪೋಶಕರು ತಮ್ಮ ಮಕ್ಕಳನ್ನು ಕರೆ ತಂದು ವೇದಿಕೆ ಮೇಲೆ ಬಿಟ್ಟು ಪುನೀತ್ ಜೊತೆ ಡ್ಯಾನ್ಸ್ ಮಾಡಿಸಿದರು. ಇನ್ನೂ ಕೆಲಸು ಕಡೆ ನೂರಾರು ಪುರುಷಕು ಬಂದು ಅಪ್ಪು ಜೊತೆ ಡ್ಯಾನ್ಸ್ ಮಾಡಿದರು. ಹೊಸಪೇಟೆಯಲ್ಲಿ ಮತ್ತೊಂದು ವಿಶೇಷ ಘಟನೆ ನಡೆಯಿತು. ಮಹಿಳೆಯೊಬ್ಬರು ಬಂದ ಪುನೀತ್ ಜೊತೆ ನೃತ್ಯ ಮಾಡಲು ಆರಂಭಿಸಿದರು. ದೊಡ್ಡ ಮಟ್ಟದಲ್ಲಿ ಜನರ ಗುಂಪು ಸೇರಿತು ಎಂದು ತಮ್ಮ ಶೂಟಿಂಗ್ ನ ಅನುಭವ ಹಂಚಿಕೊಂಡರು.

ಈ ಹಾಡನ್ನು ಶೂಟಿಂಗ್ ಮಾಡಲು ಆರಂಭದಲ್ಲಿ  19 ಕ್ಯಾಮೆರಾ ಬಳಸಲಾಯಿತು. ಆಮೇಲೆ ಇದರ ಜೊತೆಗೆ ಲಕ್ಷ ಕ್ಯಾಮೆರಾ ಬಳಸಲಾಯಿತು. ಗುಂಪಿನಲ್ಲಿ ಸೇರಿದ್ದ ಪ್ರತಿಯೊಬ್ಬ ಅಭಿಮಾನಿ ತಮ್ಮ ಮೊಬೈಲ್ ನಿಂದ ಶೂಟಿಂಗ್ ಅನ್ನು ಚಿತ್ರೀಕರಿಸುತ್ತಿದ್ದರು. ಅಭಿಮಾನಿಗಳೇ ನಮ್ಮ ದೇವರು ಚಿತ್ರದ ಹಾಡಿಗೆ ನಿಜವಾಗಿಯೂ ಅಭಮಾನಿಗಳೇ ದೇವರಾಗಿದ್ದರು ಎಂದು ಸೂರಿ ಹೇಳಿದ್ದಾರೆ.

ಇನ್ನು ಮುಂದಿನ ವಾರ ದೊಡ್ಮನೆ ಹುಡ್ಗ ಚಿತ್ರದ ಆಡಿಯೋ ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com