ನಟ ವಿರಾಟ್
ನಟ ವಿರಾಟ್

ಎ ಪಿ ಅರ್ಜುನ್ 'ಕಿಸ್'; ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ ಧಾರಾವಾಹಿ ನಟ ವಿರಾಟ್

ನಿರ್ದೇಶಕ ಎ ಪಿ ಅರ್ಜುನ್ ಅವರು ತಮ್ಮ ಮುಂದಿನ ಸಿನೆಮಾ 'ಕಿಸ್' ಗೆ ಕಿರುತೆರೆಯ ಧಾರಾವಾಹಿ ನಟನನ್ನ ಆಯ್ಕೆ ಮಾಡಿದ್ದಾರೆ. ನಾಯಕನಟನಾಗಲು ಅಪೇಕ್ಷಿಸಿ ಬಂದಿದ್ದ 3000 ಯುವಕರಲ್ಲಿ ವಿರಾಟ್ ಅವರನ್ನು
Published on
ಬೆಂಗಳೂರು: ನಿರ್ದೇಶಕ ಎ ಪಿ ಅರ್ಜುನ್ ಅವರು ತಮ್ಮ ಮುಂದಿನ ಸಿನೆಮಾ 'ಕಿಸ್' ಗೆ ಕಿರುತೆರೆಯ ಧಾರಾವಾಹಿ ನಟನನ್ನ ಆಯ್ಕೆ ಮಾಡಿದ್ದಾರೆ. ನಾಯಕನಟನಾಗಲು ಅಪೇಕ್ಷಿಸಿ ಬಂದಿದ್ದ 3000 ಯುವಕರಲ್ಲಿ ವಿರಾಟ್ ಅವರನ್ನು ಅರ್ಜುನ್ ಆಯ್ಕೆ ಮಾಡಿದ್ದಾರೆ. 
"ನಾನು ವಿರಾಟ್ ಅವರನ್ನು ಆಯ್ಕೆ ಮಾಡುವುದಕ್ಕೂ ಮುಂಚಿತವಾಗಿ ಸುಮಾರು 3000 ಅರ್ಜಿಗಳನ್ನು ಪರಿಶೀಲಿಸಿದೆ" ಎನ್ನುತ್ತಾರೆ ಅರ್ಜುನ್. ಮೈಸೂರಿನ ಮೂಲದ ವಿರಾಟ್ ಟಿ ವಿ ವಾಹಿನಿಯೊಂದರ ಧಾರಾವಾಹಿ 'ಜೊತೆ ಜೊತೆಯಲಿ'ಯ ನಟ. ಇವರು ಬೆಳ್ಳಿ ತೆರೆಗೆ ಜಿಗಿಯಲು ನಾಲ್ಕು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರಂತೆ. "ನನ್ನ 'ಕಿಸ್' ಸಿನೆಮಾ ಹೀರೊ ಶೀಘ್ರದಲ್ಲೇ ಚಿತ್ರತಂಡ ಸೇರಲಿದ್ದಾರೆ, ಹಾಗೆಯೇ ಸೂಕ್ತ ನಾಯಕನಟಿಯ ಹುಡುಕಾಟದಲ್ಲಿದ್ದೇನೆ" ಎನ್ನುತ್ತಾರೆ ನಿರ್ದೇಶಕ ಅರ್ಜುನ್. 
ವಿರಾಟ್ ನಾಯಕನಟನಾಗಲು ಅರ್ಜುನ್ ಅವರ ತಾಯಿಯು ಕಾರಣವಂತೆ. "ನಾನು ಆಡಿಶನ್ ಗಾಗಿ ವಿವಿಧ ಪ್ರದೇಶಗಳಿಗೆ ಪ್ರವಾಸ ಮಾಡುವಾಗ, ನನ್ನನ್ನು ಹುಡುಕಿಕೊಂಡು ಅವರು ನನ್ನ ಮನೆಗೆ ಹಲವಾರು ಬಾರಿಗೆ ಬಂದರಂತೆ. ಆಗ ಆಡಿಶನ್ ಗೆ ಬರಲು ನಾನು ಅವರಿಗೆ ತಿಳಿಸಿದ್ದೆ. ಅರ್ಜಿ ಹಾಕಿದ್ದ 3000 ಯುವಕರಲ್ಲಿ 120 ಕ್ಕೆ ಇಳಿಸಿ ಕೊನೆಗೆ 6 ಜನಕ್ಕೆ ಇಳಿಸಿದೆವು. ಆರು ಜನರಲ್ಲಿ ವಿರಾಟ್ ಒಬ್ಬರಾಗಿದ್ದರು. ನನ್ನ ತಾಯಿಗೆ ಕೂಡ ವಿರಾಟ್ ಸೂಕ್ತ ಆಯ್ಕೆಯೆನಿಸಿ ಅವರನ್ನೇ ಅಂತಿಮಗೊಳಿಸಿದೆವು" ಎನ್ನುತ್ತಾರೆ ಅರ್ಜುನ್.
ವಿ ಹರಿಕೃಷ್ಣ ಸಿನೆಮಾಗೆ ಸಂಗೀತ ನೀಡಲಿದ್ದು, ಗಿರೀಶ್ ಗೌಡ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com