ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ; ಸಲೀಂ ಖಾನ್

ತಮ್ಮ ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ ಎಂದು ಅರ್ಬಾಜ್‌ ಖಾನ್‌ ಅವರ ತಂದೆ ಸಲೀಂ ಖಾನ್ ಅವರು ಹೇಳಿದ್ದಾರೆ...
ಮಲೈಕಾ ಅರೋರಾ ಮತ್ತು ಅರ್ಬಾಜ್‌ ಖಾನ್‌
ಮಲೈಕಾ ಅರೋರಾ ಮತ್ತು ಅರ್ಬಾಜ್‌ ಖಾನ್‌

ಮುಂಬೈ: ತಮ್ಮ ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ ಎಂದು ಅರ್ಬಾಜ್‌ ಖಾನ್‌ ಅವರ ತಂದೆ ಸಲೀಂ ಖಾನ್ ಅವರು ಹೇಳಿದ್ದಾರೆ. 

ಬಾಲಿವುಡ್‌ ಅಂಗಳದಲ್ಲಿ ಭಾರಿ ಸುದ್ದಿ ಮಾಡುತ್ತಿರವ ಮಲೈಕಾ ಅರೋರಾ ಮತ್ತು ಅರ್ಬಾಜ್‌ ಖಾನ್‌ರ ವಿರಸ ದಾಂಪತ್ಯ ವಿಚ್ಛೇದನದೊಂದಿಗೆ ಮುಕ್ತಾಯವಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೇ ಇದೀಗ ಅರ್ಬಾಜ್‌ ಖಾನ್‌ ಅವರ ತಂದೆ ಸಲೀಂ ಖಾನ್ ಅವರು ಈ ರೀತಿಯ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣ ಮಾಡಿಕೊಟ್ಟಿದೆ.

ಮಗನ ವಿಚ್ಛೇದನ ಕುರಿತಂತೆ ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸಲೀಂ ಖಾನ್ ಅವರು, ನಾನೊಬ್ಬ ಬರಹಗಾರ. ಇತರರ ಪ್ರೇಮ ಸಂಬಂಧ, ವಿಚ್ಛೇದನದ ಕುರಿತಂತೆ ನನ್ನನ್ನೇನು ಕೇಳಬೇಡಿ. ನನ್ನ ಮಕ್ಕಳ ವೈಯಕ್ತಿಕ ಜೀವನದಲ್ಲಿ ನಾನು ತಲೆಹಾಕುವುದಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇದರಂತೆ ಮಲೈಕಾ ಅವರ ತಾಯಿ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಅವರಿಬ್ಬರು ವಯಸ್ಕರು. ವೈಯಕ್ತಿಕ ಜೀವನದ ವಿಚಾರಗಳು ಹಾಗೂ ವ್ಯವಹಾರಗಳು ಅವರ ನಿರ್ಧಾರಕ್ಕೆ ಬಿಟ್ಟದ್ದು. ಇದರಲ್ಲಿ ನಾನೇನ್ನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಮಲೈಕ ಹಾಗೂ ಅರ್ಬಾಜ್ ದಂಪತಿಗಳಿಗೆ 13 ವರ್ಷದ ಮಗುವಿದ್ದು, ಇಬ್ಬರೂ ತಮ್ಮ 18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಇಬ್ಬರೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com