ಆರ್ ಜಿ ವಿ 'ಐಸ್ ಫ್ರೂಟ್' ಡಬ್ಬಿಂಗ್; ಮತ್ತೆ ಗರಿಗೆದರಿದ ಪರ-ವಿರೋಧ ಚರ್ಚೆ

ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಐಸ್ ಫ್ರೂಟ್' ಚಲನಚಿತ್ರ ಕನ್ನಡಕ್ಕೆ ಡಬ್ಬಿಂಗ್ ಆಗಿ ಶುಕ್ರವಾರ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಡಬ್ಬಿಂಗ್
ಆರ್ ಜಿ ವಿ 'ಐಸ್ ಫ್ರೂಟ್' ಸಿನೆಮಾದ ಭಿತ್ತಿಚಿತ್ರ
ಆರ್ ಜಿ ವಿ 'ಐಸ್ ಫ್ರೂಟ್' ಸಿನೆಮಾದ ಭಿತ್ತಿಚಿತ್ರ

ಬೆಂಗಳೂರು: ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಐಸ್ ಫ್ರೂಟ್' ಚಲನಚಿತ್ರ ಕನ್ನಡಕ್ಕೆ ಡಬ್ಬಿಂಗ್ ಆಗಿ ಶುಕ್ರವಾರ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಡಬ್ಬಿಂಗ್ ಪರವಾಗಿ ನಡೆಸುತ್ತಿರುವ ಹೋರಾಟಗಾರರ ಹಾಗೂ ಡಬ್ಬಿಂಗ್ ವಿರೋಧಿ ಕನ್ನಡ ಚಿತ್ರೋದ್ಯಮದ ಕೆಲವರ ನಡುವೆ ಮಾತಿನ ಚಕಮಕಿಗೆ ಸಾಮಾಜಿಕ ಅಂತರ್ಜಾಲ ವೇದಿಕೆಯಾಗಿತ್ತು.

ಈ ಸಿನೆಮಾದಲ್ಲಿ ಡಬ್ಬಿಂಗ್ ಮಾಡಲು ಬಳಸಲಾಗಿರುವ ಕನ್ನಡ ಭಾಷೆಯ ಬಳಕೆ-ಉಚ್ಛಾರಣೆ ಕಳಪೆ ಗುಣಮಟ್ಟದ್ದು ಎಂದು ಡಬ್ಬಿಂಗ್ ವಿರೋಧಿಗಳು ವಾದಿಸಿ ಲೇವಡಿ ಮಾಡಿದ್ದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಡಬ್ಬಿಂಗ್ ಪರ ಹೋರಾಟಗಾರರು, ಇದು ಆರಂಭವಷ್ಟೇ! ಇನ್ನೂ ಅತ್ಯುತ್ತಮವಾಗಿ ಮೂಡಿ ಬರುವ ಅವಕಾಶವನ್ನು ತಡೆಯಲು ಯಾವುದೇ ಕಾರಣವಿಲ್ಲ ಎಂದಿದ್ದರು. ಹಾಗೆಯೇ ಪುನೀತ್ ರಾಜಕುಮಾರ್ ಅವರ ಮುಂಬರಲಿರುವ ಚಿತ್ರ 'ಚಕ್ರವ್ಯೂಹ' ಸಿನೆಮಾದಲ್ಲಿ, ತೆಲುಗು ನಟ ಜೂನಿಯರ್ ಎನ್ ಟಿ ಆರ್ ಹಾಡಿರುವ 'ಗೆಳೆಯಾ ಗೆಳೆಯಾ' ಹಾಡನ್ನು ಹಾಡಿರುವ ರೀತಿ-ಉಚ್ಛಾರಣೆ ಕೂಡ ಕಳಪೆಯಾದದ್ದೇ ಎಂದು ತಿರುಗೇಟು ನೀಡಿತ್ತು ಡಬ್ಬಿಂಗ್ ಪರ ವಾದಿಸುತ್ತಿರುವ ಬಳಗ.

ಈಗ ಅಚ್ಚರಿ ನಡೆಯಲ್ಲಿ ಶನಿವಾರ ಯುಟ್ಯೂಬ್ ನಿಂದ ಆರ್ ಜಿ ವಿ ಅವರ 'ಐಸ್ ಫ್ರೂಟ್' ಕನ್ನಡ ಡಬ್ಬಿಂಗ್ ಅವತರಿಣಿಕೆ ಕಾಣೆಯಾಗಿದ್ದು, ಇನ್ನೂ ಕಾವೇರಿದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com