ಸುಶಾಂತ್ ರಜಪೂತ್ ಮತ್ತು ಅಂಕಿತಾ ಲೋಖಾಂಡೆ ನಡುವಿನ ಬಿರುಕಿಗೆ ಪರಿಣಿತಿ ಕಾರಣ?

ಬಾಲಿವುಡ್ ಜೋಡಿಗಳ ಸಂಬಂಧದ ಬಿರುಕಿನ ಸುದ್ದಿಗಳ ನಡುವೆ ಹಿಂದಿ ಕಿರುತೆರೆ ಜೋಡಿಯ ಸಂಬಂಧವೊಂದು ಮುರಿದು ಬಿದ್ದಿದೆ.
ಸುಶಾಂತ್ ರಜಪೂತ್ ಮತ್ತು ಅಂಕಿತಾ ಲೋಖಾಂಡೆ
ಸುಶಾಂತ್ ರಜಪೂತ್ ಮತ್ತು ಅಂಕಿತಾ ಲೋಖಾಂಡೆ

ನವದೆಹಲಿ: ಬಾಲಿವುಡ್ ಜೋಡಿಗಳ ಸಂಬಂಧದ ಬಿರುಕಿನ ಸುದ್ದಿಗಳ ನಡುವೆ ಹಿಂದಿ ಕಿರುತೆರೆ ಜೋಡಿಯ ಸಂಬಂಧವೊಂದು ಮುರಿದು ಬಿದ್ದಿದೆ.

ಹಿಂದಿ ಕಿರುತೆರೆಯ ಪ್ರಸಿದ್ಧ ಜೋಡಿಯಾದ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಾಂಡೆ ನಡುವಿನ ಆರು ವರ್ಷದ ಸಂಬಂಧದಲ್ಲಿ ಬಿರುಕು ಮೂಡಿ ಇಬ್ಬರು ದೂರಾಗಿದ್ದಾರೆ.

ತಮ್ಮ ಸಂಬಂಧ ಮುರಿದು ಬಿದ್ದು ತಾವಿಬ್ಬರೂ ಬೇರೆ ಬೇರೆಯಾಗಿರುವುದರ ಬಗ್ಗೆ ಇಬ್ಬರು ಒಪ್ಪಿಕೊಂಡಿದ್ದಾರೆ. ಮೂಲಗಳ ಪ್ರಕಾರ ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಈ ಜೋಡಿಯ ಸಂಬಂಧ ಹಳಸಲು ಕಾರಣ ಎನ್ನಲಾಗುತ್ತಿದೆ.

ಪರಿಣಿತಿ ಛೋಪ್ರಾ ಸುಶಾಂತ್ ಸಿಂಗ್ ರಜಪೂತ್ ಗೆ ತುಂಬಾ ಹತ್ತಿರವಾಗುತ್ತಿದ್ದು, ಇದು ಅಂಕಿತಾಗೆ ಇರುಸು ಮುರುಸು ಉಂಟು ಮಾಡಿದೆ. ಹೀಗಾಗಿ ಇಬ್ಬರು ದೂರಾಗಿದ್ದಾರೆ ಎನ್ನಲಾಗುತ್ತಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com