
ನಟ ಧನಂಜಯ್ ಮುಖ್ಯಭೂಮಿಕೆಯಲ್ಲಿರುವ ವಿಜಯಾಧಿತ್ಯ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅವರು ನಟಿಸಲಿದ್ದಾರೆ.
ನಿರ್ದೇಶಕ ನಿರ್ಭಯ್ ಚಕ್ರವರ್ತಿ ತಮ್ಮ ಮೊದಲ ಚಿತ್ರದಲ್ಲೇ ಭಾರಿ ಬಜೆಟ್ ನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ಭಯ್ ತಮ್ಮ ಚಿತ್ರದ ಪಾತ್ರಕ್ಕಾಗಿ ಜಗಪತಿ ಬಾಬು ಅವರನ್ನು ಭೇಟಿಯಾಗಿ ಪಾತ್ರದ ಕುರಿತಾದ ಟೀಸರ್ ಹಾಗೂ ಕ್ಲಿಪಿಂಗ್ ಗಳನ್ನು ತೊರಿಸಿದೆ. ಅದನ್ನು ನೋಡಿ ಮೆಚ್ಚಿದ ಜಗಪತಿ ಬಾಬು ಅವರು ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರೆ ಎಂದು ನಿರ್ಭಯ್ ಹೇಳಿದ್ದಾರೆ.
ವಿಜಯಾಧಿತ್ಯ ಚಿತ್ರದಲ್ಲಿ ಜಗಪತಿ ಬಾಬು ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಸೂಕ್ತ ಸಮಯದಲ್ಲಿ ಅವರ ಪಾತ್ರದ ಅನಾವರಣ ಮಾಡುತ್ತೇನೆ. ಜಗಪತಿ ಬಾಬು ಅವರ ಪಾತ್ರದ ಚಿತ್ರೀಕರಣ ಮುಂದಿನ ತಿಂಗಳಲ್ಲಿ ನಡೆಸಲಾಗುವುದು ಎಂದು ನಿರ್ಭಯ್ ತಿಳಿಸಿದ್ದಾರೆ.
Advertisement