'ಪುಷ್ಪಕ ವಿಮಾನ'ದ ಮೂಲಕ ಶತಕ ಬಾರಿಸಲಿರುವ ರಮೇಶ್ ಅರವಿಂದ್

ತಮ್ಮ ಮುಂದಿನ ಚಿತ್ರ 'ಪುಷ್ಪಕ ವಿಮಾನ' ಚಿತ್ರದ ಚಿತ್ರೀಕರಣ ಮುಗಿಸಿರುವ ನಟ ರಮೇಶ್ ಅರವಿಂದ ವಿವಿಧ ಪಾತ್ರಗಳಲ್ಲಿನ ತಮ್ಮ ಮನೋಜ್ಞ ನಟನೆಗೆ ಕನ್ನಡ ನಾಡಿನ ಮತೆಮಾತಾದವರು.
'ಪುಷ್ಪಕ ವಿಮಾನ' ಸಿನೆಮಾದಲ್ಲಿ ರಮೇಶ್ ಅರವಿಂದ್
'ಪುಷ್ಪಕ ವಿಮಾನ' ಸಿನೆಮಾದಲ್ಲಿ ರಮೇಶ್ ಅರವಿಂದ್
Updated on

ಬೆಂಗಳೂರು: ತಮ್ಮ ಮುಂದಿನ ಚಿತ್ರ 'ಪುಷ್ಪಕ ವಿಮಾನ' ಚಿತ್ರದ ಚಿತ್ರೀಕರಣ ಮುಗಿಸಿರುವ ನಟ ರಮೇಶ್ ಅರವಿಂದ ವಿವಿಧ ಪಾತ್ರಗಳಲ್ಲಿನ ತಮ್ಮ ಮನೋಜ್ಞ ನಟನೆಗೆ ಕನ್ನಡ ನಾಡಿನ ಮತೆಮಾತಾದವರು. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ೧೪೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು, ಕನ್ನಡದಲ್ಲಿ 'ಪುಷ್ಪಕ ವಿಮಾನ' ೧೦೦ನೇ ಸಿನೆಮಾ ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ, "'ಪುಷ್ಪಕ ವಿಮಾನ'ದ ಮೂಲಕ ೧೦೦ ಮುಟ್ಟುತ್ತಿರುವುದು ನನಗೆ ವಿಶೇಷ ಮತ್ತು ಇದು ಅದ್ಭುತ ಸಿನೆಮಾ. ಟೀಸರ್ ಪ್ರೇಕ್ಷಕರಲ್ಲಿ ಕೆರಳಿಸಿದ್ದ ಆಸಕ್ತಿಯನ್ನು ಸಿನೆಮಾ ಉಳಿಸಿಕೊಳ್ಳಲಿದೆ" ಎನ್ನುತ್ತಾರೆ ರಮೇಶ್.

ಕನ್ನಡ ಚಿತ್ರರಂಗದಲ್ಲಿ ತಮ್ಮ ಪಯಣವನ್ನು ನೆನಪಿಸಿಕೊಳ್ಳುವ ರಮೇಶ್ "ಹಣ, ಹೆಸರು ಇವೆಲ್ಲಾ ಹೆಚ್ಚುವರಿ ಸಂತಸಗಳು ಆದರೆ ನಿಜವಾದ ತೃಪ್ತಿ ಇರುವುದು ಕೆಲಸದಲ್ಲೇ - ಅದು ನಟನೆಯಾಗಿರಲಿ, ನಿರ್ದೇಶನವಾಗಲಿ ಅಥವಾ ಟಿವಿ ವಾಹಿನಿ ಕಾರ್ಯಕ್ರಮ ನಡೆಸಿಕೊಡುವುದಾಗಿರಲಿ. ಇವೆಲ್ಲವೂ ನನ್ನನ್ನು ಜೀವಂತವಾಗಿಡುತ್ತದೆ" ಎಂದು ವಿವರಿಸುತ್ತಾರೆ ರಮೇಶ್.

ತಮ್ಮ ಮುಂದಿನ ಪಯಣದ ಬಗ್ಗೆ ವಿವರಿಸುವ ಅವರು ತಮ್ಮ ಹಿಂದಿನ ಸಾಧನೆಗಳನ್ನು ನೆನಪಿಸಿಕೊಳ್ಳುವುದಕ್ಕಿಂತ ಮುಂದಿನ ಕೆಲಸದ ಬಗ್ಗೆಯೇ ನನಗೆ ಹೆಚ್ಚು ಚಿಂತೆ ಎನ್ನುತ್ತಾರೆ "ಅವಕಾಶದ ಎಷ್ಟು ಮುಖ್ಯ ಎಂಬುದು ಹಿಂದೆಗಿಂತಲೂ ಈಗ ಚೆನ್ನಾಗಿ ತಿಳಿದಿದೆ. ಯಶಸ್ಸು ಮತ್ತು ತಾರಾವರ್ಚಸ್ಸಿನ ಬೆಲೆಯನ್ನು ನಾನು ಬಲ್ಲೆ. ಇವೆಲ್ಲವೂ ನನ್ನ ಕೆಲಸದಲ್ಲಿ ಹೆಚ್ಚಿನ ದಕ್ಷತೆಯನ್ನು ಮೂಡಿಸುತ್ತದೆ" ಎನ್ನುತ್ತಾರೆ ನಟ.

ಎಸ್ ರವೀಂದ್ರನಾಥ್ ನಿರ್ದೇಶನದ 'ಪುಷ್ಪಕ ವಿಮಾನ'ದಲ್ಲಿ ಜೂಹಿ ಚಾವ್ಲಾ, ರಚಿತಾ ರಾಮ್ ಮತ್ತು ಬಾಲ ನಟಿ ಯುವಿನಾ ಪಾರ್ಥವಿ ಕೂಡ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com