
ಧಾರಾವಾಹಿಗಳ ಮೂಲಕ ಸ್ಪಾಟ್ ಲೈಟ್ ಗೆ ಬಂದ ಅಧಿತಿ ರಾವ್ ಸಂತು ನಿರ್ದೇಶನದ ಡವ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಅವರ ಅಭಿನಯದ ಅಕಿರ ಚಿತ್ರ ಇದೇ ವಾರ ಬಿಡುಗಡೆಯಾಗಲಿದೆ.
ಕನ್ನಡದಲ್ಲಿ ಡವ್ ಮತ್ತು ಹುಚ್ಚುಡುಗರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಚಾಪು ಮುಡಿಸಿರುವ ಅಧಿತಿರ ಮೂರನೇ ಚಿತ್ರ ಅಕಿರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಬಿಡುಗಡೆ ಕುರಿತಂತೆ ಉತ್ಸುಕತೆಯಲ್ಲಿರುವ ಅಧಿತಿ ಅವರ ಮನದಾಳದ ಮಾತು.
ಅಕಿರ ಚಿತ್ರದ ಕುರಿತು ಅಭಿಮಾನಿಗಳು ಪ್ರತಿಕ್ರಿಯೆ ನೋಡಲು ಹರ್ಷ ಮತ್ತು ಕುತೂಹಲ ಹೊಂದಿದ್ದೇನೆ. ಕೆಟ್ಟ ಚಿತ್ರಗಳನ್ನು ಮಾಡುವ ಮೂಲಕ ನನ್ನ ಬೇಡಿಕೆಯನ್ನು ಕಳೆದುಕೊಳ್ಳದೆ ಉತ್ತಮ ಚಿತ್ರಗಳನ್ನು ಮಾಡುವ ಮೂಲಕ ಬಹಳ ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಉಳಿಯಲು ಇಚ್ಛಿಸುತ್ತೇನೆ ಎಂದರು.
ಮೊದಲ ಬಾರಿಗೆ ಕ್ರಿಷಿ ತಪ್ಪಂದ ಅವರು ಬಂದು ಅಕಿರ ಚಿತ್ರದ ಕಥೆಯನ್ನು ಹೇಳಿದಾಗ ನಾನು ನೋ ಅಂದಿದ್ದೇ, ಆದರೂ ಬಿಡದ ಅವರು ಎರಡನೇ ಬಾರಿಗೆ ನನ್ನ ಬಳಿ ಬಂದಾಗ ನಾನು ಓಕೆ ಅಂದೆ. ನಿಜಕ್ಕೂ ಅವತ್ತು ನಾನು ಒಳ್ಳೆ ತೀರ್ಮಾನ ತೆಗೆದುಕೊಂಡಿದ್ದೇನೆ ಅಂತ ಹೀಗ ಎನ್ನಿಸುತ್ತಿದೆ. ಚಿತ್ರದಲ್ಲಿ ಉತ್ತಮ ಪಾತ್ರ ನೀಡಿದ ನಿರ್ದೇಶಕ ಚೇತನ್ ಹಾಗೂ ನಿರ್ದೇಶಕ ನವೀನ್ ಅವರಿಗೆ ನಾನು ಅಭಾರಿ ಎಂದರು.
ಅಕಿರ ಒಂದು ಅರ್ಥಪೂರ್ಣ ಸಿನಿಮಾ. ಚಿತ್ರದಲ್ಲಿ ಮೂರು ಪಾತ್ರಗಳು ಪ್ರಮುಖವಾಗಿ ಕಾಡುತ್ತದೆ. ಅದು ಅನೀಶ್ ತೇಜಸ್ವರ್, ಕ್ರಿಷಿ ಮತ್ತು ನನ್ನದು. ನನ್ನ ನಂಬಿಕೆ ನಾನೇ ಚಿತ್ರದ ನಿಜವಾದ ಹಿರೋಯಿನ್. ಚಿತ್ರದಲ್ಲಿ ಒಲ್ಡ್ ಎಜ್ ಹೋಮ್ ನಡೆಸುತ್ತಿರುವ ಸಾಹಿತಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ಹಿಂದಿನ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ಸ್ವಲ್ಪ ಭಿನ್ನವಾಗಿದೆ ಎಂದರು ಅಧಿತಿ.
ವಿದೇಶದಲ್ಲಿ ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಮಾಡಲಾಯಿತು. ನನ್ನ ಹಾಗೂ ಹಿರೋ ಜತೆಗಿನ ಪ್ರೇಮ ನಿವೇದನೆಯ ಹಾಡನ್ನು ಚಿತ್ರೀಕರಿಸಲಾಯಿತು. ಇನ್ನು ವಿಲಕ್ಷಣ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು ನನಗೆ ಹೊಸ ಅನುಭವ ನೀಡಿದೆ ಎಂದು ಅಧಿತಿ ಹೇಳಿದರು.
ಅಕಿರ ಚಿತ್ರದ ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ಅಧಿತಿ ಕೈಯಲ್ಲಿ ಎರಡು ಚಿತ್ರಗಳಿವೆ. ಒಂದು ದಸರಾ ಗೊಂಬೆ ಮತ್ತು ಜಂಡಗಳು ಚಿತ್ರೀಕರಣ ನಡೆಸುತ್ತಿವೆ.
Advertisement