ಮುಂದಿನ ಚಿತ್ರದಲ್ಲಿ ಪಾಸ್ಪೋರ್ಟ್ ವಿತರಣೆಯ ಅಸಮಂಜಸತೆಯನ್ನು ಚರ್ಚಿಸಲಿರುವ 'ಕಾಕ ಮುಟ್ಟೈ' ನಿರ್ದೇಶಕ

ನಿರ್ದೇಶಕ ಎಂ ಮನಿಕಂಠನ್ ಅವರ ಮೂರನೇ ತಮಿಳು ಸಿನೆಮಾ 'ಆಂದವಾನ್ ಕತ್ತಾಲೈ' ನಲ್ಲಿ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಪಾಸ್ಪೋರ್ಟ್ ವಿತರಣೆಯ ಅಸಮಂಜಸತೆಯನ್ನು
'ಆಂದವಾನ್ ಕತ್ತಾಲೈ' ನಲ್ಲಿ ವಿಜಯ್ ಸೇತುಪತಿ
'ಆಂದವಾನ್ ಕತ್ತಾಲೈ' ನಲ್ಲಿ ವಿಜಯ್ ಸೇತುಪತಿ
Updated on

ಚೆನ್ನೈ: ನಿರ್ದೇಶಕ ಎಂ ಮನಿಕಂಠನ್ ಅವರ ಮೂರನೇ ತಮಿಳು ಸಿನೆಮಾ 'ಆಂದವಾನ್ ಕತ್ತಾಲೈ' ನಲ್ಲಿ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಪಾಸ್ಪೋರ್ಟ್ ವಿತರಣೆಯ ಅಸಮಂಜಸತೆಯನ್ನು ಚರ್ಚಿಸಲಿದೆಯಂತೆ.

"ಇದು ಲಘು ಹಾಸ್ಯದ ಮನರಂಜನಾ ಚಿತ್ರ ಆದರೆ ಪಾಸ್ಪೋರ್ಟ್ ವಿತರಣೆಯ ಅಸಮಂಜಸತೆಯನ್ನು ಮತ್ತು ನಾವು ಅದಕ್ಕಾಗಿ ನಿತ್ಯ ಎದುರಿಸುವ ಹಲವಾರು ಅಡೆ ತೊಡೆಗಳನ್ನು ಸೆರೆ ಹಿಡಿಯಲಿದೆ. ಚಲನಚಿತ್ರದ ಕೊನೆಯ ಹಂತದ ಚಿತ್ರೀಕರಣ ಎಂಬಸಿ ಸೆಟ್ ನಲ್ಲಿ ನಡೆಯುತ್ತಿದೆ" ಎಂದು ಮೂಲಗಳು ತಿಳಿಸಿವೆ.

ಅವರ ಹಿಂದಿನ ರಾಷ್ಟ್ರಪ್ರಶಸ್ತಿ ವಿಜೇತ 'ಕಾಕಾ ಮುಟ್ಟೈ'ಗೆ ಹೋಲಿಸಿದರೆ ಇದು ನೈಜ ಮನರಂಜನಾ ಚಿತ್ರವಂತೆ.

"ಇದು ಗಂಭೀರ ವಿಷಯವನ್ನು ಚರ್ಚಿಸಿದರೂ, ಇಡೀ ಸಿನೆಮಾವನ್ನು ಮನರಂಜನೆಯಿಂದ ಚಿತ್ರಿಸಲಾಗಿದೆ" ಎಂದು ಮೂಲಗಳು ತಿಳಿಸಿದ್ದು, ರಿತಿಕಾ ಸಿಂಗ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

'ಕಾಕ ಮುಟ್ಟೈ' ನಲ್ಲಿ ನಟಿಸಿದ್ದ ಯೋಗಿ ಬಾಬು ಕೂಡ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com