'ಕಬಾಲಿ' ಕರ್ನಾಟಕ ವಿತರಣಾ ಹಕ್ಕು ದಕ್ಕಿಸಿಕೊಂಡ ರಾಕ್ಲೈನ್

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಸಂಬಂಧ 'ಲಿಂಗಾ' ಸಿನೆಮಾದ ನಂತರವೂ ಮುಂದುವರೆದಿದೆ. ಈಗ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ತಮಿಳು ಸೂಪರ್ ಸ್ಟಾರ್ ರಜನಿಕಾಂತ್
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ತಮಿಳು ಸೂಪರ್ ಸ್ಟಾರ್ ರಜನಿಕಾಂತ್

ಬೆಂಗಳೂರು: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಸಂಬಂಧ 'ಲಿಂಗಾ' ಸಿನೆಮಾದ ನಂತರವೂ ಮುಂದುವರೆದಿದೆ. ಈಗ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ 'ಕಬಾಲಿ'ಯ ಕರ್ನಾಟಕದ ವಿತರಣಾ ಹಕ್ಕನ್ನು ಪಡೆಯುವಲ್ಲಿ ರಾಕ್ಲೈನ್ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ೧೦ ಕೋಟಿ ಚೆಲ್ಲಿದ್ದಾರೆ ಎನ್ನುತ್ತವೆ ಮೂಲಗಳು.

ಈ ಹಿಂದೆ ರಾಕ್ಲೈನ್, ರಜನೀಕಾಂತ್ ಅಭಿನಯದ 'ಲಿಂಗಾ' ಸಿನೆಮಾ ನಿರ್ಮಿಸಿ ಬಿಡುಗಡೆಯ ನಂತರ ವಿವಾದಕ್ಕೆ ಒಳಗಾಗಿದ್ದರು. ಸಿನೆಮಾ ನಿರೀಕ್ಷಿತ ಪ್ರದರ್ಶನೆ ಕಾಣದೆ ತಮಿಳುನಾಡಿನ ಹಲವಾರು ವಿತರಕರು ಮತ್ತು ಚಿತ್ರಮಂದಿರ ಮಾಲೀಕರು ಪ್ರತಿಭಟನೆ ನಡೆಸಿದ್ದರು. ನಂತರ ವೆಂಕಟೇಶ್ ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಸಿನೆಮಾ ನಿರ್ಮಿಸಿದ್ದರು. ಇದು ಬಾಕ್ಸ್ ಆಫೀಸ್ ನಲ್ಲಿ ಅತ್ಯುತ್ತಮ ಗಳಿಕೆ ಕಂಡಿತ್ತು.

ಸದ್ಯಕ್ಕೆ ವೆಂಕಟೇಶ್ ಕನ್ನಡ ಚಿತ್ರ 'ಗಂಡು ಎಂದರೆ ಗಂಡು' ನಿರ್ಮಿಸುತ್ತಿದ್ದಾರೆ. ಗಣೇಶ್ ಮತ್ತು ಶಾನ್ವಿ ಶ್ರೀವಾಸ್ತವ್ ನಟಿಸುತ್ತಿರುವ ಈ ಸಿನೆಮಾವನ್ನು ರಮೇಶ್ ಅರವಿಂದ್ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ತಮಿಳು ಸಿನೆಮಾಗಳಾದ 'ವಿಸಾರಣೈ' ಮತ್ತು 'ವಿಐಪಿ' ಸಿನೆಮಾಗಳ ರಿಮೇಕ್ ಹಕ್ಕುಗಳನ್ನು ಕೂಡ ಕೊಂಡಿದ್ದಾರೆ.

'ಕಬಾಲಿ' ಸಿನೆಮಾದ ಆಡಿಯೋ ಬಿಡುಗಡೆ ಮೇ ೩೦ ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದ್ದು, ಸಿನೆಮಾ ಜುಲೈ ೨೦ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com