ಯೂಟರ್ನ್, ಅಲ್ಲಮ, ಹರಿಕಥಾ ಪ್ರಸಂಗ
ಯೂಟರ್ನ್, ಅಲ್ಲಮ, ಹರಿಕಥಾ ಪ್ರಸಂಗ

ಗೋವಾ ಚಲನಚಿತ್ರೋತ್ಸವದಲ್ಲಿ ಕನ್ನಡ ಮೂರು ಚಿತ್ರಗಳ ಪ್ರದರ್ಶನ

ನಿರ್ದೇಶಕ ಪವನ್ ಕುಮಾರ್ ಸಸ್ಪೆನ್ ಥ್ರಿಲ್ಲರ್ ಕಥೆಯಾಧಾರಿತ ಚಿತ್ರ ಯೂಟರ್ನ್ 2016ರಲ್ಲಿ ಜನರ ಮೆಚ್ಚುಗೆ ಗಳಿಸಿದ ಚಿತ್ರಗಳಲ್ಲಿ ಒಂದಾಗಿದ್ದು ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ...
Published on

ನಿರ್ದೇಶಕ ಪವನ್ ಕುಮಾರ್ ಸಸ್ಪೆನ್ ಥ್ರಿಲ್ಲರ್ ಕಥೆಯಾಧಾರಿತ ಚಿತ್ರ ಯೂಟರ್ನ್ 2016ರಲ್ಲಿ ಜನರ ಮೆಚ್ಚುಗೆ ಗಳಿಸಿದ ಚಿತ್ರಗಳಲ್ಲಿ ಒಂದಾಗಿದ್ದು ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ನವೆಂಬರ್ 20 ರಿಂದ 28ರವರೆಗೆ ನಡೆಯಲಿರುವ ಪಮೋರಮಾ ಚಲನಚಿತ್ರ ಉತ್ಸಮದಲ್ಲಿ ಯೂಟರ್ನ್ ಜತೆಗೆ ಹಿರಿಯ ನಿರ್ದೇಶಕ ಟಿಎಸ್ ನಾಗಾಭರಣ ನಿರ್ದೇಶನದ ಇನ್ನು ತೆರೆಕಾಣದ ಚಿತ್ರ ಅಲ್ಲಮ ಮತ್ತು ಅನನ್ಯ ಕಾಸರವಳ್ಳಿ ನಿರ್ದೇಶನದ ಹರಿಕಥಾ ಪ್ರಸಂಗ ಚಿತ್ರಗಳು ಪ್ರೀಮಿಯರ್ ಆಗಲಿದೆ.

ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ನೇತೃತ್ವದ 13 ಸದಸ್ಯರ ಸಮಿತಿಯು 230 ಚಿತ್ರಗಳ ಪೈಕಿ 22 ಚಿತ್ರಗಳನ್ನು ಆಯ್ಕೆ ಮಾಡಿದ್ದು ಕನ್ನಡ 3 ಚಿತ್ರಗಳು ಸೇರಿದಂತೆ ಇನ್ನಿಂತರ ಭಾಷೆಗಳ 19 ಚಿತ್ರಗಳು ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com