ಮಕ್ಕಳ ಜಂಟಿ ಸುಪರ್ದಿಗೆ ಬ್ರಾಡ್ ಪಿಟ್ ದಾವೆ

ಪತ್ನಿ ಏಂಜಲೀನಾ ಜೋಲಿ ವಿಚ್ಚೇಧನ ಕೋರಿರುವುದರಿಂದ, ಹಾಲಿವುಡ್ ನಟ ಬ್ರಾಡ್ ಪಿಟ್ ತಮ್ಮ ಮಕ್ಕಳ ಜಂಟಿ ಸುಪರ್ದಿಗಾಗಿ ಈಗ ಮೊರೆ ಹೋಗಿದ್ದಾರೆ.
ವಿಚ್ಚೇಧನಗೊಳುತ್ತಿರುವ ಬ್ರಾಂಜಲೀನಾ ಜೋಡಿ
ವಿಚ್ಚೇಧನಗೊಳುತ್ತಿರುವ ಬ್ರಾಂಜಲೀನಾ ಜೋಡಿ
Updated on
ಲಾಸೆಂಜಲಿಸ್: ಪತ್ನಿ ಏಂಜಲೀನಾ ಜೋಲಿ ವಿಚ್ಚೇಧನ ಕೋರಿರುವುದರಿಂದ, ಹಾಲಿವುಡ್ ನಟ ಬ್ರಾಡ್ ಪಿಟ್ ತಮ್ಮ ಮಕ್ಕಳ ಜಂಟಿ ಸುಪರ್ದಿಗಾಗಿ ಈಗ ಮೊರೆ ಹೋಗಿದ್ದಾರೆ.
ಜೋಲಿ ಅವರ ವಿಚ್ಚೇಧನ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ 52 ವರ್ಷದ ನಟ ಅವರ ಆರೂ ಜನ ಮಕ್ಕಳ ಜಂಟಿ ಸುಪರ್ದಿಗಾಗಿ ದಾವೆ ಸಲಿದ್ದಾರೆ ಎಂದು ಅಂತರ್ಜಾಲ ಪತ್ರಿಕೆಯೊಂದು ವರದಿ ಮಾಡಿದೆ. 
ಇಬ್ಬರು ವಿಚ್ಛೇಧನದ ದಿನಾಂಕಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಯಾರು ಯಾರಿಂದಲೂ ಪರಿಹಾರ ಕೋರಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆ ಜೋಲಿ ಅವರು ಮಕ್ಕಳನ್ನು ನೋಡಿಕೊಳ್ಳುವುದು, ಬ್ರಾಡ್ ಅವರು ಬೇಕೆಂದಾಗ ಸಲಹೆಗಾರರ ಸಮ್ಮುಖದಲ್ಲಿ ಮಕ್ಕಳನ್ನು ಭೇಟಿಯಾಗುವ ಯೋಜನೆಗೆ ಒಪ್ಪಿಕೊಂಡಿದ್ದರು ಈಗ ನಿಲುವು ಬದಲಿಸಿದ್ದಾರೆ ಎನ್ನಲಾಗಿದೆ. 
ಸೆಪ್ಟೆಂಬರ್ 14 ರಂದು ವಿಮಾನದಲ್ಲಿ ತೆರಳುವಾದ ಮದ್ಯಪಾನ ಮಾಡಿದ್ದ ಬ್ರಾಡ್ ಮಗ ಮೆಡ್ಡಾಕ್ಸ್ ಜೊತೆಗೆ ಅನುಚಿತವಾಗಿ ವರ್ತಿಸಿ, ತಳ್ಳಿದ್ದರು ಎಂಬ ಕಾರಣಕ್ಕೆ ಜೋಲಿ ವಿಚ್ಛೇಧನದ ಮೊರೆ ಹೋಗಿದ್ದರು ಎನ್ನಲಾಗಿತ್ತು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com