ಬೆಂಗಳೂರು: ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಹುಚ್ಚ ವೆಂಕಟ್ ಅವರು ಪ್ರಥಮ್ ಮೇಲೆ ಹಲ್ಲೆ ನಡೆಸಿರುವುದನ್ನು ನಟ ಹಾಗೂ ನಿರೂಪಕ ಕಿಚ್ಚ ಸುದೀಪ್ ಅವರು ಖಂಡಿಸಿದ್ದು, ಹುಚ್ಚ ವೆಂಕಟ್ ಅವರಿಗೆ ಶಿಕ್ಷೆಯಾದ ನಂತರವಷ್ಟೇ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತೇನೆಂದು ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಅವರು, ಈಗಷ್ಟೇ ಕಾರ್ಯಕ್ರಮವನ್ನು ನೋಡಿದೆ. ಹುಚ್ಚ ವೆಂಕಟ್ ಅವರು ಮತ್ತೆ ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಹುಚ್ಚ ವೆಂಕಟ್ ಅವರು ಮಾಡಿರುವುದು ಅಕ್ಷಮ್ಯ ತಪ್ಪು. ನಾನು ಖಂಡಿತವಾಗಿಯೂ ನ್ಯಾಯದ ಪರವಾಗಿ ನಿಲ್ಲುತ್ತೇನೆಂದು ಹೇಳಿದ್ದಾರೆ.
Advertisement