
ಬೆಂಗಳೂರು: ಟಾಲಿವುಡ್'ನ ಬ್ಲಾಕ್ ಬಸ್ಟರ್ ಸಿನೆಮಾ ಪೆಳ್ಳಿ ಚೂಪುಲು ಚಿತ್ರ ಕನ್ನಡದಲ್ಲಿ ರಿಮೇಕ್ ಮಾಡಲಾಗುತ್ತಿದೆ ಎಂಬ ಮಾತುಗಳ ಕೆಲ ದಿನಗಳ ಹಿಂದಷ್ಟೇ ಕೇಳಿಬಂದಿತ್ತು. ಇದೀಗ ಊಹಾಪೋಹಗಳಿಗೆ ಯುಟರ್ನ್ ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಅವರು ತೆರೆ ಎಳೆದಿದ್ದು, ಪೆಳ್ಳಿ ಚೂಪುಲು ಚಿತ್ರದಲ್ಲಿ ನಟಿಸುತ್ತಿರುವುದು ನಿಜ ಎಂದು ಹೇಳಿದ್ದಾರೆ.
ತಮ್ಮ ಪಾತ್ರ ಹಾಗೂ ಚಿತ್ರದಲ ಬಗ್ಗೆ ಶ್ರದ್ಧಾ ಶ್ರೀನಾಥ್ ಅವರು ಹೇಳಿಕೊಂಡಿದ್ದು, ಸಿನಿಮಾದಲ್ಲಿ ನಟಿಸುವ ಮೊದಲು ನನಗೆ ದೊರಕಿತ್ತು. ಚಿತ್ರದ ಬಗ್ಗೆ ನನ್ನ ಗೆಳೆಯರು ಹಾಗೂ ಹತ್ತಿರದ ವ್ಯಕ್ತಿಗಳು ಸಾಕಷ್ಟು ಹೇಳಿದ್ದರು. ಚಿತ್ರವನ್ನು ನೋಡುವಂತೆ ಹೇಳುತ್ತಿದ್ದರೆ. ಆದರೆ, ಕೆಲಸಗಳಲ್ಲಿ ಕಾರ್ಯಪ್ರವೃತ್ತಳಾಗಿದ್ದರಿಂದಾಗಿ ಸಿನಿಮಾವನ್ನು ನೋಡಲು ಸಾಧ್ಯವಾಗಿರಲಿಲ್ಲ. ಪವನ್ ಒಡೆಯರ್ ಅವರು ಚಿತ್ರದಲ್ಲಿ ನಟಿಸುವಂತೆ ನನಗೆ ಆಫರ್ ನೀಡಿದರು. ಕೆಲವೊಮ್ಮೆ ಕೆಲ ಪಾತ್ರಗಳು ನಮಗೆ ಒಪ್ಪುತ್ತವೆ. ಅದನ್ನು ನಾವು ಮಾಡಬಹುದು ಎನಿಸುತ್ತದೆ. ಹೀಗಾಗಿ ಪೆಳ್ಳಿ ಚೂಪುಲು ರಿಮೇಕ್ ಗೆ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.
ಚಿತ್ರದ ಸಬ್ಜೆಕ್ಟ್ ಹೊಸದಾಗಿದೆ ಎನಿಸಿತು. ಸಾಕಷ್ಟು ಸಿನಿಮಾವನ್ನು ರಿಮೇಕ್ ಎಂದು ಹೇಳುತ್ತಿದ್ದಾರೆ. ಅದರೆ, ನಾನು ಚಿತ್ರವನ್ನು ಹೊಸದಾಗಿಯೇ ವಿಷಯವೆಂದೇ ಪರಿಗಣಿಸುತ್ತಿದ್ದೇನೆ. ಏಕೆಂದರೆ ನಾನು ಸಿನಿಮಾವನ್ನು ನೋಡಿಯೇ ಇಲ್ಲ. ಸಿನಿಮಾದ ಕಥೆ ಯುವ ಪೀಳಿಗೆಗೆ ಸಂಬಂಧಿಸಿದ್ದಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ಇಲ್ಲಿಯವರೆಗೂ ನಾನು ಮಾಡಿದ ಎಲ್ಲಾ ಪಾತ್ರಗಳನ್ನೂ ವಿವರಿಸುತ್ತದೆ.
ಹರ್ಷ ಎಂಟರ್ ಟೈನರ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಯು ಟರ್ನ್ ಚಿತ್ರದ ಬಳಿಕ ಶ್ರದ್ಧಾ ಶ್ರೀನಾಥ್ ಅವರು ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದು, ಪ್ರಸ್ತುತ ಗೌತಮ್ ಕಾರ್ತಿಕ್ ಅವರೊಂದಿಗೆ ತಮಿಳುನ ಇವನ್ ಥಾಂತಿರನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ.
ತರುಣ್ ಭಾಸ್ಕರ್ ದಾಸ್ಯಮ್ ನಿರ್ದೇಶಿಸಿದ್ದ ೨೦೧೬ ರ ರೋಮ್ಯಾಂಟಿಕ್ ಕಾಮಿಡಿ ಸಿನೆಮಾ 'ಪೆಳ್ಳಿ ಚೂಪುಲು'ನಲ್ಲಿ ವಿಜಯ್ ದೇವರಕೊಂಡ ಮತ್ತು ರಿತು ವರ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನೆಮಾ ಅಮೆರಿಕಾದಲ್ಲಿಯೇ ಮಿಲಿಯನ್ ಡಾಲರ್ ಕ್ಲಬ್ ಸೇರಿ ಅತ್ಯುತ್ತಮ ಗಳಿಕೆ ಕಂಡಿತ್ತು. ಇದರ ತಮಿಳು ರಿಮೇಕ್ ಹಕ್ಕುಗಳನ್ನು ಗೌತಮ್ ವಾಸುದೇವ್ ಕೊಂಡಿದ್ದಲ್ಲದೆ, ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಇದನ್ನು ಬಾಲಿವುಡ್ ನಲ್ಲಿ ರಿಮೇಕ್ ಮಾಡುವ ಆಸಕ್ತಿ ತೋರಿದ್ದರು.
Advertisement