ಬೆಂಗಳೂರು: ಅವರು ಯುವಕರಾಗಿದ್ದಾಗ ಮಂಜು ಮಾಂಡವ್ಯ, ಥಿಯೇಟರ್ ನಲ್ಲಿ ತಮ್ಮ ನೆಚ್ಚಿನ ಹೀರೋಗಳು ತೆರೆಯ ಮೇಲೆ ಮೂಡಿದಾಗ ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರಂತೆ. ಕಾಲೇಜು ದಿನಗಳಲ್ಲಿ ತಮ್ಮ ನೆಚ್ಚಿನ ಹೀರೋಗಳನ್ನು ಅನುಕರಿಸಿ ವೇದಿಕೆ ಮೇಲೆ ಅಭಿನಯಿಸುತ್ತಿದ್ದರು ಕೂಡ. ನಂತರ ಹಲವು ವರ್ಷಗಳ ಪರಿಶ್ರಮದ ನಂತರ, ಸಂಭಾಷಣಕಾರರಾಗಿ ಕೊನೆಗೆ ಯಶ್ ನಟನೆಯ 'ಮಾಸ್ಟರ್ ಪೀಸ್' ಕೂಡ ನಿರ್ದೇಶಿಸಿದ ಹೆಗ್ಗಳಿಕೆ. ಈಗ ಮಂಜು ಮಾಂಡವ್ಯ ತಮ್ಮ ನೆಚ್ಚಿನ ಆರಾಧ್ಯ ನಟ ಉಪೇಂದ್ರ ಅವರನ್ನು ನಿರ್ದೇಶಿಸಲಿದ್ದಾರೆ.