"ಕಾಶಿ ಜೊತೆಗೆ ಕೆಲಸ ಮಾಡುವ ಅದೃಷ್ಟ ನಮ್ಮದಾಗಿತ್ತು. ಇದು ಅವರ ಕೊನೆಯ ಚಿತ್ರ. ಶ್ರೀನಿವಾಸ ಮೂರ್ತಿ, ಗಿರಿಜಾ ಲೋಕೇಶ್, ಲಕ್ಷ್ಮಿದೇವಮ್ಮ, ಬ್ಯಾಂಕ್ ಜನಾರ್ಧನ್ ಮುಂತಾದವರು ಈ ಸಿನೆಮಾದಲ್ಲಿದ್ದಾರೆ. ಸಿನಿಮಾರಂಗ ಉಪೇಕ್ಷಿಸಿದ್ದಾರೆ ಎನ್ನಿಸಿದ ಈ ಹಿರಿಯ ನಟರನ್ನು ನಾವು ಆಯ್ಕೆ ಮಾಡಿಕೊಂಡೆವು. ಹೊಸ ನಟರು ಕನ್ನಡ ಚಿತ್ರರಂಗಕ್ಕೆ ಯಥೇಚ್ಛವಾಗಿ ಬರುತ್ತಿದ್ದರು, ಈ ಹಿರಿಯ ನಟರಲ್ಲಿ ಕಲೆ ಬಹಳಷ್ಟು ಉಳಿದಿದೆ ಮತ್ತು ಅವರನ್ನೆಲ್ಲಾ ಒಂದೇ ಫ್ರೇಮ್ ನಲ್ಲಿ ತೋರಿಸಲಿದ್ದೇವೆ" ಎನ್ನುತ್ತಾರೆ ನಿರ್ಮಾಪಕ.