ನಾನು ಹೊಟ್ಟೆಪಾಡಿಗಾಗಿ ಹಾಡುವ ಸಾಮಾನ್ಯ ಮನುಷ್ಯ: ಎಸ್ ಪಿ ಬಿ

ಚಿತ್ರೋದ್ಯಮದಲ್ಲಿ 50 ವರ್ಷಗಳಿಂದ ಗೀತೆಯನ್ನು ಮೆಲುದನಿಯಲ್ಲಿ ಹಾಡುತ್ತಾ ಖ್ಯಾತಿ ಗಳಿಸಿರುವ ಗಾನ ಕೋಗಿಲೆ ಎ.ಪಿ.ಬಾಲಸುಬ್ರಹ್ಮಣ್ಯಂ...
ಅಂದಿನ ರಾಷ್ಟ್ರಪತಿ ಡಾ.ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ
ಅಂದಿನ ರಾಷ್ಟ್ರಪತಿ ಡಾ.ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ
ಚಿತ್ರೋದ್ಯಮದಲ್ಲಿ 50 ವರ್ಷಗಳಿಂದ ಗೀತೆಯನ್ನು ಮೆಲುದನಿಯಲ್ಲಿ ಹಾಡುತ್ತಾ ಖ್ಯಾತಿ ಗಳಿಸಿರುವ ಗಾನ ಕೋಗಿಲೆ ಎ.ಪಿ.ಬಾಲಸುಬ್ರಹ್ಮಣ್ಯಂ ತಮ್ಮನ್ನು ತಾವು ಬಣ್ಣಿಸುವುದು ಹೀಗೆ. ಭಾರತದ ಅನೇಕ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಹಲವು ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಎಸ್ ಪಿಬಿ ಅಂದು ಅನೇಕ ವಿಷಯಗಳನ್ನು ಹೇಳಲು ಹೊರಟಿದ್ದರು.
 ''ಅಂದು ಡಿಸೆಂಬರ್ 15, 1966ರಂದು ಮೈಕ್ರೋಫೋನ್ ಮುಂದೆ ನಿಂತಿದ್ದೆ. ಏನು ಹೇಳಲಿ ನಾನು? ಅಂದು ನನ್ನಂತಹ ಅನನುಭವಿ ಹಾಡುಗಾರನಿಗೆ ಜೀವನ ನಿಜಕ್ಕೂ ಕರುಣೆ ತೋರಿಸಿತ್ತು. ಈ ವರ್ಷ ನಾನು ನನ್ನ ವಿಶ್ವ ಪರ್ಯಟನೆಯ ಭಾಗವಾಗಿ ಮಾಸ್ಕೋದ ಕ್ರೆಮ್ಲಿನ್ ಅರಮನೆಯಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ನೀಡುತ್ತಿದ್ದೇನೆ.'' ಎಂದು ಹೇಳುವಾಗ ಅವರ ಧ್ವನಿಯಲ್ಲಿ ಇಂಪು ಕೇಳಿಬರುತ್ತಿತ್ತು. ಅವರ ಮಧುರ ಸ್ವಭಾವ ಮತ್ತು ಉತ್ತಮ ಆಲೋಚನೆಗಳು ಯುವ ಗಾಯಕರು ರಿಯಾಲಿಟಿ ಕಾರ್ಯಕ್ರಮಗಳ ಮೂಲಕ ಬೆಳಗುವಂತೆ ಮಾಡಿದೆ. ಎಸ್ ಪಿಬಿಯವರು ತಮ್ಮ ಜೀವನವನ್ನು ಮೆಲುಕು ಹಾಕುತ್ತಿರುವಾಗ ಅಲ್ಲಿ ಯಾವುದೇ ತಪ್ಪುಗಳು ನಡೆದಿರುವುದು ಕಂಡುಬರುವುದಿಲ್ಲ.
1984ರಲ್ಲಿ ಹಾಡಿದ ಕದಲಿನ್ ದೀಪಂ ಒಂದ್ರು ರಜನಿಕಾಂತ್ ಅವರ ಸಿನಿಮಾಗಳಿಗೆ ಹಾಡಿದ ಗೀತೆಗಳಲ್ಲಿ ಉತ್ತಮವಾದುದು. ಇನ್ನು ಕಮಲ್ ಹಾಸನ್ ಅವರ ಬಗ್ಗೆ ಹೇಳಬೇಕೆಂದರೆ ನನ್ನ ಹಾಡು ಮತ್ತು ಅವರ ನಟನೆ ಮೇಡ್ ಫಾರ್ ಈಚ್ ಅದರ್ ಎಂಬಂತಿತ್ತು.
ನೀವು ತಮಿಳಿನಲ್ಲಿ ಎಂಜಿಆರ್ ಮತ್ತು ಶಿವಾಜಿ ಗಣೇಶನ್ ಹಾಗೂ ತೆಲುಗಿ ನಲ್ಲಿ ಎನ್ ಟಿ ರಾಮ ರಾವ್ ಮತ್ತು ಎ.ನಾಗೇಶ್ವರ ರಾವ್ ಅವರ ಚಿತ್ರಗಳಿಗೆ ಹಾಡಲು ಆರಂಭಿಸಿದಿರಿ ಎಂದು ಕೇಳಿದಾಗ-
ನನ್ನ ಸಂಗೀತ ನಿರ್ದೇಶಕರು, ಚಿತ್ರ ನಿರ್ದೇಶಕರು ಮತ್ತು ಚಿತ್ರದ ನಾಯಕರಿಂದ ಒಂದೇ ಸಮನಾದ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಪೊಟ್ಟು ವೈತ ಮುಗಮೊ ಹಾಡಿನ ರೆಕಾರ್ಡಿಂಗ್ ಗೆ ಶಿವಾಜಿಯವರು ಬಂದಿದ್ದರು. ಅದು 1971ರಲ್ಲಿ ಸುಮತಿ ಎನ್ ಸುಂದರಿ ಚಿತ್ರದ ಹಾಡಿನ ರೆಕಾರ್ಡಿಂಗ್. ಆಗ ನಾನು ಕಾಲೇಜು ಮುಗಿಸಿ ಹೊರಬಂದಿದ್ದಷ್ಟೆ. ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ಅವರು ನನ್ನ ಆತಂಕವನ್ನು ದೂರ ಮಾಡಿ ತಮ್ಮ ನಟನೆಯನ್ನು ನನ್ನ ಹಾಡಿಗೆ ಹೊಂದಿಸಿಕೊಳ್ಳುತ್ತೇನೆ ಎಂದರು. 1969ರಲ್ಲಿ ಎಂಜಿಆರ್ ಅವರು ಅದಿಮೈ ಪೆನ್ನ್ ಚಿತ್ರದ ಹಾಡಿಗಾಗಿ ಮೂರು ತಿಂಗಳು ಕಾದಿದ್ದರು. ಅದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎನ್ನುತ್ತಾರೆ ಎಸ್ ಪಿಬಿ.
ಕೆ.ಬಾಲಚಂದರ್, ಭಾರತೀರಾಜ, ಮಣಿ ರತ್ನಂ ಅವರ ಚಿತ್ರಗಳಲ್ಲಿ ಹಾಡುಗಳಿಗೆ ವಿಶೇಷ ಸನ್ನಿವೇಶವಿರುತ್ತದೆ. ಅವರ ಚಿತ್ರಗಳ ಹಾಡುಗಳು ನನಗೆ ಖ್ಯಾತಿ ತಂದುಕೊಟ್ಟವು. ಅರುಲ್ ನಿಧಿ ಚಿತ್ರದ ಹಾಡಿಗೆ ಇತ್ತೀಚೆಗೆ ನಾನು ವಿಶಾಲ್ ಚಂದ್ರಶೇಖರ್ ಅವರ ಜೊತೆ ರೆಕಾರ್ಡ್ ಮುಗಿಸಿದ್ದೇನೆ. 50 ವರ್ಷಗಳು ಕಳೆದ ನಂತರವೂ ನಾನು ಇಂದಿಗೂ ಪ್ರಸ್ತುತನಾಗಿದ್ದೇನೆ. ನಾನು ಹಾಸ್ಯ ನಟನಿಗೆ ಹಾಡುವುದನ್ನು ಹೊರತುಪಡಿಸಿ ಬೇರೆ ಯಾವ ನಟರನ್ನೂ ಅನುಕರಿಸುವುದಿಲ್ಲ ಎನ್ನುತ್ತಾರೆ ಎಸ್ ಪಿಬಿ.
ಬೇರೆಯವರು ಹಾಡಿದ ನಿಮಗೆ ಯಾವುದಾದರೂ ಇಷ್ಟವಾದ ಹಾಡುಗಳಿವೆಯೇ? ನಿಮಗೆ ಅದನ್ನು ಹಾಡಬೇಕೆತ್ತು ಅನಿಸಿದೆಯೇ?
ಓಹ್ ಸಾಕಷ್ಟಿದೆ. ಅದು ಪುರುಷರು ಹಾಡಿದ್ದು ಮಾತ್ರವಲ್ಲ. ನಾನು ಎಸ್.ಜಾನಕಿಯವರು ಹಾಡಿದ ಊರು ಸನಮ್ ಹಾಡನ್ನು ತುಂಬಾ ಮೆಚ್ಚಿದ್ದೇನೆ. ಟಿಎಂಎಸ್ ಅವರ ಯಾರ್ ಅಂತ ನಿಲವು, ಕೆಜೆ ಯೇಸುದಾಸ್ ಅವರ ಉನ್ನಿದಮ್ ಮಾಯಾಂಗುಗೆರಿನ್ ಮೊದಲಾದ ಹಾಡುಗಳು ನನಗೆ ತುಂಬಾ ಅಚ್ಚುಮೆಚ್ಚು. ನಾನು ಆರಂಭದ ದಿನಗಳಲ್ಲಿ ಕಿಶೋರ್ ಕುಮಾರ್ ಅವರಂತೆ ಹಾಡುತ್ತಿತ್ತೆ. ಆದರೆ ನನ್ನ ಹೃದಯದಲ್ಲಿ ರಫಿ ಸಾಬ್ ಅವರ ಧ್ವನಿಯೇ ಅನುರಣಿಸುತ್ತಿತ್ತು. ನಾನು ನನ್ನ ಸ್ಟೇಜ್ ಶೋಗಳಲ್ಲಿ ರಫಿ ಸಾಬ್ ಅವರಂತೆ ಒಂದೆರಡು ಗೀತೆಗಳನ್ನು ಹಾಡಲು ಪ್ರಯತ್ನಿಸುತ್ತೇನೆ.
ಲೈವ್ ಆಗಿ ಹಾಡುವುದು ನಿಮ್ಮ ಸಾಮರ್ಥ್ಯ, ಅದನ್ನು ನೀವು ನಿರಾಯಾಸವಾಗಿ ಹಾಡುತ್ತೀರಿ ಹೇಗೆ?
ಖಂಡಿತಾ ಇಲ್ಲ, ನಾನು ಪ್ರತಿ ಸಾರಿ ವೇದಿಕೆ ಹತ್ತುವಾಗಲೂ ನರ್ವಸ್ ಆಗಿರುತ್ತೇನೆ, ನಾನು ಪ್ರೇಕ್ಷಕರ ಮೂಡ್ ನ್ನು ಕೆಲ ಹೊತ್ತಿನವರೆಗೆ ಸಂವಹನ ನಡೆಸುವಾಗ ನೋಡುತ್ತೇನೆ. ನಾನು ಅವರನ್ನು ಮತ್ತು ಆರ್ಕೆಸ್ಟ್ರಾ ತಂಡವನ್ನು ಸ್ವಾಗತಿಸಿ ಕಾರ್ಯಕ್ರಮ ಆರಂಭಿಸುತ್ತೇನೆ. ನನ್ನ ಸುತ್ತಮುತ್ತಲಿನ ವಾತಾವರಣ ಸಹಜವಾಗಿ ಹಿತವಾಗಿದೆ ಎನಿಸಿದ ಮೇಲೆ ಹಾಡಲು ಆರಂಭಿಸುತ್ತೇನೆ. ಹಾಡುಗಳ ರೆಕಾರ್ಡ್ ಮಾಡುವಾಗಲೂ ಉಸಿರು, ಪಾಸ್, ನಗು ಎಲ್ಲವನ್ನೂ ನೋಡುತ್ತೇನೆ. 
ಅದೊಂದು ಕಾಲವಿತ್ತು ಎಸ್ ಪಿಬಿಯವರು ಡಜನ್ ಗಟ್ಟಲೆ ಹಾಡುಗಳನ್ನು ಒಂದೇ ದಿವಸ ಹಾಡುತ್ತಿದ್ದರು. ಹಾಡುವುದರಲ್ಲಿ ಏನಾದರೂ ಎಸ್ ಪಿಬಿ ಮಾದರಿಯಿದೆಯೇ?
- ನಾನು ದಿನದಲ್ಲಿ ಗರಿಷ್ಠ 19 ಗೀತೆಗಳನ್ನು ಹಾಡಿದ ಸಂದರ್ಭವಿದೆ. 16 ಗೀತೆಗಳನ್ನು ಸಲ್ಮಾನ್ ಖಾನ್ ಗೆ ಹಾಡಿದ್ದೇನೆ. ನನಗೆ ಮುಂಬೈಗೆ ಪ್ರಯಾಣ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಗೀತೆಯ ರಾಗ ಕಲಿಯುವಾಗ ನಾನು ಶೇಕಡಾ 100ರಷ್ಟು ಏಕಾಗ್ರಚಿತ್ತನಾಗಿರುತ್ತಿದ್ದೆ. 20 ನಿಮಿಷದಲ್ಲಿ ಹಾಡು ಕಲಿಯುತ್ತಿದ್ದೆ. ಹಾಡಲು ಸಿದ್ದನಾಗುತ್ತಿದ್ದೆ. ನನಗೆ ಭಾಷೆ ಸಹಜವಾಗಿ ಬರುತ್ತಿತ್ತು. ಇಂದಿಗೂ ಹಾಡನ್ನು ಸಾಲುಗಳಿಂದ ಸಾಲುಗಳಿಗೆ ರೆಕಾರ್ಡ್ ಮಾಡುವಾಗ ಬಳಸುವ ತಂತ್ರಜ್ಞಾನ ನಾನು ಇಡೀ ಪಲ್ಲವಿಯನ್ನು ಹಾಡುತ್ತೇನೆ. ಕೆಲವು ಸಂಗೀತಗಾರರು ಹಾಡು ಬರೆಯುವ ಮೊದಲು ನನ್ನನ್ನು ಯೋಚಿಸಿಯೇ ಬರೆಯುತ್ತಾರೆ, ಏಕೆಂದರೆ ಚಿತ್ರದ ಸನ್ನಿವೇಶ ನನ್ನಂತಹ ಹಾಡುಗಾರರನ್ನು ಬಯಸುತ್ತದೆ ಎಂದು ಖುಷಿಯಿಂದ ಹೇಳುತ್ತಾರೆ ಎಸ್ ಪಿ ಬಾಲಸುಬ್ರಹ್ಮಣ್ಯಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com