ಮುಂಬೈ: ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ತಮ್ಮ 150 ನೇ ಚಿತ್ರ 'ಖೈದಿ ನಂ. 150'ಕ್ಕೆ ವಿಶೇಷ ಹಾಡಿನ ಚಿತ್ರೀಕರಣದಲ್ಲಿ ಇತ್ತೀಚೆಗಷ್ಟೇ ಪಾಲ್ಗೊಂಡಿದ್ದರು.
ಹೈದರಾಬಾದ್ ನಲ್ಲಿ ವಿಶೇಷವಾಗಿ ಹಾಕಲಾಗಿದ್ದ ಬೃಹತ್ ಸೆಟ್ ನಲ್ಲಿ 'ರಥಳು ರಥಳು' ಹಾಡಿನ ಚಿತ್ರೀಕರಣ ಕಳೆದ ವಾರ ಜರುಗಿದೆ. ಈ ಹಾಡಿಗೆ ನಟ-ನಿದೇಶಕ ರಾಘವ ಲಾರೆನ್ಸ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದಕ್ಕಾಗಿ ಸೂಪರ್ ಸ್ಟಾರ್ ಅವರ ಗುರುತಿನ ಶೈಲಿಯ ನಡೆಗಳನ್ನು ಬಳಸಿಕೊಳ್ಳಲಾಗಿದೆಯಂತೆ.
ದೇವಿ ಶ್ರೀ ಪ್ರಸಾದ್ ಬರೆದು ಸಂಗೀತ ನೀಡಿರುವ ಈ ಹಾಡಿನಲ್ಲಿ ಚಿರಂಜೀವಿ ಮತ್ತು ಲಕ್ಷ್ಮಿ ರೈ ಕಾಣಿಸಿಕೊಳ್ಳಲಿದ್ದಾರೆ.
ಸೂಪರ್ ಸ್ಟಾರ್ ರಾಮಚರಣ್ ನಿರ್ಮಿಸುತ್ತಿರುವ ಈ ಸಿನೆಮಾವನ್ನು ವಿ ವಿ ವಿನಾಯಕ್ ನಿರ್ದೇಶಿಸುತ್ತಿದ್ದಾರೆ.