ಶ್ವೇತಾ ಶ್ರೀವಾತ್ಸವ್ ಹುಟ್ಟುಹಬ್ಬಕ್ಕೆ ಸಿನೆಮಾ ಉಡುಗೊರೆ

ಹೊಸ ನಿರ್ದೇಶಕ ಸಾಮ್ಯುಯೆಲ್ ಟೋನಿ ಅವರ ಇನ್ನು ಹೆಸರಿಡದ ಚಿತ್ರದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ನಟಿಸಲಿದ್ದಾರೆ. ರಾಜೇಂದ್ರ ಪ್ರಸಾದ್ ನಿರ್ಮಾಣದ ಈ ಯೋಜನೆ ಸೆಪ್ಟೆಂಬರ್ ಅಂತ್ಯದಿಂದ
ನಟಿ ಶ್ವೇತಾ ಶ್ರೀವಾತ್ಸವ್
ನಟಿ ಶ್ವೇತಾ ಶ್ರೀವಾತ್ಸವ್
Updated on
ಬೆಂಗಳೂರು: ಹೊಸ ನಿರ್ದೇಶಕ ಸಾಮ್ಯುಯೆಲ್ ಟೋನಿ ಅವರ ಇನ್ನು ಹೆಸರಿಡದ ಚಿತ್ರದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ನಟಿಸಲಿದ್ದಾರೆ. ರಾಜೇಂದ್ರ ಪ್ರಸಾದ್ ನಿರ್ಮಾಣದ ಈ ಯೋಜನೆ ಸೆಪ್ಟೆಂಬರ್ ಅಂತ್ಯದಿಂದ ಪ್ರಾರಂಭವಾಗಲಿದೆ ಎಂದು ನಟಿ ಹೇಳಿದ್ದಾರೆ.
ಸೆಪ್ಟೆಂಬರ್ 4 ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಶ್ವೇತಾಗೆ ಇದು ಉಡುಗೊರೆಯಾಗಿ ಸಿಕ್ಕಿದೆ. ಸಿಂಪಲ್ ಆಗ್ ಲವ್ ಸ್ಟೋರಿ ಮೂಲಕ ಗಮನ ಸೆಳೆದು, ಕಿರಗೂರಿನ ಗಯ್ಯಾಳಿಗಳು ಸಿನೆಮಾದಲ್ಲಿ ನಟಿಸಿದ್ದ ನಟಿ ಈ ಸಿನೆಮಾದಲ್ಲಿ ನಟಿಸುವುದಕ್ಕೂ ಮೊದಲು ತುಸು ವಿರಾಮ ತೆಗೆದುಕೊಂಡಿದ್ದರು. 
"ನಾನು ಒಳ್ಳೆಯ ಸ್ಕ್ರಿಪ್ಟ್ ಗಳಿಗಾಗಿ ಕಾಯುತ್ತೇನೆ. ಕೆಲವು ಒಳ್ಳೆಯ ಸ್ಕ್ರಿಪ್ಟ್ ಗಳು ಬಂದವಾದರೂ, ಚಿತ್ರತಂಡದ ಬಗ್ಗೆ ವಿಶ್ವಾಸವಿರಲಿಲ್ಲ. ಅಲ್ಲದೆ ಸಂಭಾವನೆಯ ಬಗ್ಗೆಯೂ ಮಾತುಕತೆ ಮುಂದುವರೆಯಲಿಲ್ಲ. ಈ ಅಂತರ ನನ್ನ ತಾಳ್ಮೆಯನ್ನು ಪರೀಕ್ಷಿಸಿತು. ಈಗ ಒಳ್ಳೆಯ ಸ್ಕ್ರಿಪ್ಟ್ ಒಂದು ಒಲಿದುಬಂದಿರುವುದಕ್ಕೆ ಸಂತಸವಾಗಿದೆ" ಎನ್ನುತ್ತಾರೆ ಶ್ವೇತಾ. 
ಈ ಸಿನೆಮಾ ತಮಗೆ ವಿಶೇಷ ಎನ್ನುವ ನಟಿ, ತೆರೆಯ ಮೇಲೆಯೂ ಸಿನೆಮಾ ಸ್ಟಾರ್ ಆಗಿ ಪಾತ್ರ ಪಡೆದಿದ್ದಾರಂತೆ. "ನನ್ನ ಹಿಂದಿನ ಸಿನೆಮಾಗಳಿಗೆ ಹೋಲಿಸಿದರೆ ಇದು ಸಂಪೂರ್ಣ ವಿಭಿನ್ನ ಪಾತ್ರ" ಎನ್ನುವ ನಟಿ ಇದು ಯಾವುದೇ ನಿಜ ಜೀವನದ ಹೀರೋಯಿನ್ ಪಾತ್ರದಿಂದ ಸ್ಫೂರ್ತಿ ಪಡೆದಿರಲ್ಲ ಎಂದು ಕೂಡ ಸ್ಪಷ್ಟಗೊಳಿಸುತ್ತಾರೆ. 
ತಿಲಕ್ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com