ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಬಾಲಿವುಡ್ ಜೋಡಿ ಅಜಯ್ ದೇವಗನ್ ಮತ್ತು ಕಾಜೋಲ್ ಸ್ಯಾನ್ ಫ್ರಾನ್ಸಿಸ್ಕೋದ ಫೇಸ್ಬುಕ್ ಕಚೇರಿಗೆ ಭೇಟಿ ಕೊಟ್ಟಿದ್ದಲ್ಲದೆ, ನಟಿ ಕಾಜೋಲ್ ಫೇಸ್ಬುಕ್ ನಲ್ಲಿ ಪಾದಾರ್ಪಣೆ ಮಾಡಿದ್ದಾರೆ.
17 ವರ್ಷಗಳಿಂದ ಮದುವೆಯಾಗಿರುವ ಅಜಯ್ ಮತ್ತು ಕಾಜೋಲ್ ಶುಕ್ರವಾರ ಫೇಸ್ಬುಕ್ ಕಚೇರಿಗೆ ಭೇಟಿ ನೀಡಿದ್ದಾರೆ.
ಫೇಸ್ಬುಕ್ ನಲ್ಲಿ ತಮ್ಮ ಮೊದಲ ಪೋಸ್ಟ್ ಬಗ್ಗೆ ಉತ್ಸುಕರಾಗಿ ವಿಡಿಯೋವೊಂದರಲ್ಲಿ ಮಾತನಾಡಿರುವ ಕಾಜೋಲ್ "ಗೆಳೆಯರೇ! ಈಗ ತಾನೇ ಫೇಸ್ಬುಕ್ ಕಚೇರಿಯಿಂದ ಹೊರಬಂದೆವು. ಅದ್ಭುತವಾಗಿತ್ತು. ಆದುದರಿಂದ ಇಂದು (ಶುಕ್ರವಾರ) ನನ್ನ ಫೇಸ್ಬುಕ್ ಪುಟಕ್ಕೆ ಚಾಲನೆ ನೀಡುತ್ತಿದ್ದೇನೆ ಮತ್ತು ಇಂದು ನನ್ನ ತಾಯಿ (ತನುಜಾ) ಹುಟ್ಟುಹಬ್ಬ. ಅಮ್ಮ ಹುಟ್ಟು ಹಬ್ಬದ ಶುಭಾಶಯಗಳು ಮತ್ತು ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದಿದ್ದಾರೆ.
ಅವರ ಪತಿ ಅಜಯ್ ನಿರ್ಮಿಸಿರುವ 'ಪಾರ್ಚ್ಡ್' ಶುಕ್ರವಾರ ಬಿಡುಗಡೆಯಾಗಿದ್ದು ಅದರ ಬಗ್ಗೆಯೂ ಕಾಜೋಲ್ ಮಾತನಾಡಿದ್ದಾರೆ. "'ಪಾರ್ಚ್ಡ್' ಕೂಡ ಬಿಡುಗಡೆಯಾಗಿದೆ, ಮತ್ತು ಇಂದು ನಿನ್ನ ಹುಟ್ಟುಹಬ್ಬವಾಗಿರಿವುದರಿಂದ ಬಿಡುಗಡೆಗೆ ಸರಿಯಾದ ದಿನ" ಎಂದು ಕೂಡ ಅವರು ವಿಡಿಯೋವೊಂದರಲ್ಲಿ ಹೇಳಿದ್ದಾರೆ.
ಅಜಯ್ ನಿರ್ದೇಶನದ 'ಶಿವಾಯ್' ಸಿನೆಮಾದ ಪ್ರಚಾರ ಕಾರ್ಯಕ್ರಮಕ್ಕಾಗಿ ಈ ಜೋಡಿ ನ್ಯೂಯಾರ್ಕ್, ಶಿಕಾಗೋ ಮತ್ತು ಡಲ್ಲಾಸ್ ಗೆ ಭೇಟಿ ನೀಡಿದ್ದರು.
ಫೇಸ್ಬುಕ್ ಕಚೇರಿಗೆ ಭೇಟಿ ನೀಡಿದ ಅನುಭವವನ್ನು ಅಜಯ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು "ಹಲವಾರು ಭಾರತೀಯರ ಜಾಗತಿಕವಾಗಿ ಎತ್ತರದ ಸ್ಥಾನಗಳಲ್ಲಿರುವುದನ್ನು ನೋಡುವುದಕ್ಕೆ ಹೆಮ್ಮೆಯಾಗುತ್ತದೆ. ಗೂಗಲ್. ಫೇಸ್ಬುಕ್. ಹೆಮ್ಮೆಯ ಭಾರತೀಯ" ಎಂದು ಅವರು ಟ್ವೀಟ್ ಮಾಡಿದ್ದಾರೆ.