ಬಿಡುಗಡೆಗೆ ಮುಂಚೆಯೇ 100 ಕೋಟಿ ಬಾಚಿದ 'ನಾಗರಹಾವು'; ಅಕ್ಟೋಬರ್ 14 ಕ್ಕೆ ಬಿಡುಗಡೆ

ಕೋಡಿ ರಾಮಕೃಷ್ಣ ನಿರ್ದೇಶನದ ದ್ವಿಭಾಷಾ ಚಿತ್ರ ನಾಗರಹಾವು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವತ್ತ ದಾಪುಗಾಲು ಹಾಕಿದೆ. ಸಾಜಿದ್ ಖುರೇಷಿ ನಿರ್ಮಾಣದ ಈ ಚಿತ್ರ ಬಿಡುಗಡೆಗೆ
ನಾಗರಹಾವು ಸಿನೆಮಾದ ಭಿತ್ತಿಚಿತ್ರ
ನಾಗರಹಾವು ಸಿನೆಮಾದ ಭಿತ್ತಿಚಿತ್ರ
ಬೆಂಗಳೂರು: ಕೋಡಿ ರಾಮಕೃಷ್ಣ ನಿರ್ದೇಶನದ ದ್ವಿಭಾಷಾ ಚಿತ್ರ ನಾಗರಹಾವು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವತ್ತ ದಾಪುಗಾಲು ಹಾಕಿದೆ. ಸಾಜಿದ್ ಖುರೇಷಿ ನಿರ್ಮಾಣದ ಈ ಚಿತ್ರ ಬಿಡುಗಡೆಗೆ ಮುಂಚಿತವಾಗಿಯೇ 100 ಕೋಟಿ ರೂ ವ್ಯವಹಾರ ಮಾಡಿದೆ ಚರ್ಚೆಯಲ್ಲಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅಕ್ಟೋಬರ್ 14 ರಂದು ಈ ಸಿನೆಮಾ ತೆರೆಗೆ ಅಪ್ಪಳಿಸಿದೆ. 
ಕನ್ನಡದಲ್ಲಿ ಥಿಯೇಟರ್ ವಿತರಣಾ ಹಕ್ಕುಗಳು 35 ಕೋಟಿಗೆ ಮಾರಾಟವಾಗಿದೆ ಎಂಬ ಸುದ್ದಿ ಇದ್ದಾರೆ, ತೆಲುಗು ವಿತರಣೆಯ ಹಕ್ಕನ್ನು 15 ಕೋಟಿ ರೂಗೆ ಸುರಕ್ಷಾ ಮೀಡಿಯಾ ಕೊಂಡಿದ್ದು, ತಮಿಳು ಭಾಷೆಯ ಹಕ್ಕುಗಳನ್ನು ತೇನಾಂದೇಲ್ ಫಿಲಂಸ್ 9 ಕೋಟಿಗೆ ಖರೀದಿಸಿದೆ ಎಂದು ತಿಳಿದುಬಂದಿದೆ. "ವಿದೇಶಿ ವಿತರಣೆಯ ಹಕ್ಕನ್ನು ಅನಿಲ್ ಕುಮಾರ್ ಅವರು 9 ಕೋಟಿಗೆ ಖರೀದಿಸಿದ್ದಾರೆ ಮತ್ತು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಟಿವಿ ವಾಹಿನಿ ಹಕ್ಕುಗಳು 16 ಕೋಟಿಗೆ ಮಾರಾಟವಾಗಿದೆ. ಹಿಂದಿಗೆ ಡಬ್ಬಿಂಗ್ ಮಾಡಲು 9 ಕೋಟಿಗೆ ಮಾರಾಟ ಮಾಡಲಾಗಿದೆ. ಬಿಡುಗಡೆಗೆ ಮುಂಚಿತವಾಗಿಯೇ ನಾವು 100 ಕೋಟಿ ವ್ಯವಹಾರ ಮಾಡುವ ಭರವಸೆ ಇದೆ" ಎನ್ನುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.
ಸಿನೆಮಾ ಅದ್ದೂರಿಯಾಗಿ ಬಿಡುಗಡೆ ಕಾಣಲಿದೆ ಎನ್ನುತ್ತಾರೆ ಅವರು. ಈ ಸಿನೆಮಾದಲ್ಲಿ ದಿವಂಗತ ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್ ಅವರು ಗ್ರಾಫಿಕ್ಸ್ ತಂತ್ರಜ್ಞಾನದ ನೆರವಿನಿಂದ 9 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರಂತೆ. ತೆಲುಗು ಸಿನೆಮಾಗಳಾದ 'ಈಗ' ಮತ್ತು 'ಬಾಹುಬಲಿ' ಸಿನೆಮಾಗಳಿಗೆ ಗ್ರಾಫಿಕ್ಸ್ ಮಾಡಿದ್ದ ಮಕುಟ ವಿ ಎಫ್ ಎಕ್ಸ್ ಈ ಸಿನೆಮಾಗೂ ಗ್ರಾಫಿಕ್ಸ್ ನೆರವು ನೀಡಿದ್ದು, ಇದಕ್ಕೆ ನಿರ್ಮಾಪಕರಿಗೆ ತಗಲಿರುವ ವೆಚ್ಚ ಬರ್ರೋಬರಿ 15 ಕೋಟಿ.
ನಾಗರಹಾವಿನಲ್ಲಿ ಈ ಗ್ರಾಫಿಕ್ಸ್ ಕೆಲಸ ನೋಡಿ ಮೆಚ್ಚಿರುವ ತೆಲುಗು ನಟ ನಾಗಾರ್ಜುನ ಈಗ ಅವರ ತಂದೆ ತೆಲುಗು ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ಮತ್ತೆ ತೆರೆ ಮೇಲೆ ತರಲು ಉತ್ಸುಕರಾಗಿದ್ದಾರಂತೆ. 
ದಿಗಂತ್ ಮತ್ತು ರಮ್ಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನೆಮಾದಲ್ಲಿ 120 ಅಡಿ ಹಾವು ಕೂಡ ಕಾಣಿಸಿಕೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com