
ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ಚಿತ್ರ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಪುನೀತ್ ಸಖತ್ ಆಗಿ ಫೈಟ್ ಮಾಡಿದ್ದಾರೆ.
ಇಂದು ರಾಜ್ಯಾದ್ಯಂತ ಪುನೀತ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರ ಬಿಡುಗಡೆಯಾಗಿದ್ದು, ಚಿತ್ರದ ಮಧ್ಯಂತರದಲ್ಲಿ ರಾಜಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಈ ವೇಳೆ ರಾಜಕುಮಾರ್ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಚಿತ್ರದಲ್ಲಿ ಲೇ ನೀವೆಲ್ಲಾ ಅಣ್ಣ-ಬಾಸು ಅಂತ ಬೇರೆಯವರ ಹೆಸ್ರು ಹೇಳ್ಕೊಂಡು ಪವರ್ ಗೆ ಬಂದಿರೋದು, ಆದ್ರೆ ಅವರ ಹೆಸರು ಜೊತೆಲೇ ಪವರ್ ಇರೋದು ಅಂತ ಪುನೀತ್ ಬಗ್ಗೆ ಚಿಕ್ಕಣ್ಣ ಹೊಡೆದಿರುವ ಡೈಲಾಗ್ ಫೇಮಸ್ ಆಗಿದೆ.
ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಗೆ ಜತೆಯಾಗಿ ಪ್ರಿಯಾ ಆನಂದ್, ಚಿಕ್ಕಣ್ಣ, ಶರತ್ ಕುಮಾರ್, ಅನಂತ್ ನಾಗ್, ಪ್ರಕಾಶ್ ರಾಜ್ ನಟಿಸಿದ್ದಾರೆ.
Advertisement