ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ ಜೂನಿಯರ್ ಎನ್‌ಟಿಆರ್‌

2017ನೇ ಸಾಲಿನ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್‌ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು...
ಜೂನಿಯರ್ ಎನ್‌ಟಿಆರ್‌
ಜೂನಿಯರ್ ಎನ್‌ಟಿಆರ್‌
2017ನೇ ಸಾಲಿನ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್‌ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು. 
ಚಿತ್ರೋತ್ಸವದ ಕೊನೆಯ ದಿನ ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳ ಪ್ರಶಸ್ತಿ ವಿತರಣೆಯ ನಡೆಯುತ್ತಿತ್ತು. ಈ ವೇಳೆ ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲು ವೇದಿಕೆಗೆ ಬಂದಿದ್ದ ನಟ ಜೂನಿಯರ್ ಎನ್‌ಟಿಆರ್‌. ಪ್ರಶಸ್ತಿ ನೀಡವ ಮೊದಲು ನಿರೂಪಣೆ ಮಾಡುತ್ತಿದ್ದ ನಟ ಅಕುಲ್ ಬಾಲಾಜಿ, ನಟ ರಕ್ಷಿತ್ ಶೆಟ್ಟಿ ಸಿನಿಮಾ ಪಯಣದ ಜತೆಗೆ ಅವರ ಕರಾವಳಿ ನಂಟನ್ನು ಪ್ರಸ್ತಾಪಿಸಿದರು. ಹಾಗೆಯೇ ಜೂನಿಯರ್ ಎನ್‌ಟಿಆರ್‌ ಅವರಿಗಿದ್ದ ಕನ್ನಡದ ನಂಟನ್ನು ನೆನಪಿಸಿದರು. 
ವೇದಿಕೆ ಮೇಲಿದ್ದ ಜೂನಿಯರ್ ಎನ್‌ಟಿಆರ್‌ ಮೈಕ್ ಹಿಡಿದು ತಮ್ಮ ತಾಯಿ ಕನ್ನಡದವರು, ಅವರ ಹುಟ್ಟುರು ಕುಂದಾಪುರ. ತಾತ(ಎನ್‌ಟಿಆರ್‌) ಕುಟುಂಬದ ಹಾಗೆಯೇ ಅಮ್ಮನದ್ದು ದೊಡ್ಡ ಕುಟುಂಬ ಆಗಾ ನಾನೂ ಅಲ್ಲಿಗೆ ಹೋಗಿ ಬರುತ್ತೇನೆ. ಕನ್ನಡ, ಕರ್ನಾಟಕ ನನ್ನ ಬದುಕಲ್ಲಿ ಗೊತ್ತಿಲ್ಲದಂತೆ ಬೆಸೆದುಕೊಂಡಿದೆ ಅಂತ ಭಾವುಕರಾದರು. 
ಜೂನಿಯರ್ ಎನ್‌ಟಿಆರ್‌ ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ಅಲ್ಲಿ ನೆರದಿದ್ದ ಕನ್ನಡಿಗರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ತಕ್ಷಣವೇ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡು ಹೇಳಿ ರಂಜಿಸಿದರು.
ಎನ್‌ಟಿಆರ್‌ ಅವರ ಹಿರಿಯ ಮಗ ಹರಿಕೃಷ್ಣ ಹಾಗೂ ಶಾಲಿನಿ ದಂಪತಿ ಪುತ್ರ ಜೂನಿಯರ್ ಎನ್‌ಟಿಆರ್‌. ಶಾಲಿನಿ ಅವರದ್ದು ಕುಂದಾಪುರ ಮೂಲ. ಶಾಲಿನಿ ಅವರು ಚಿಕ್ಕವರಿದ್ದಾಗಲೇ ಅವರ ಅವರ ಕುಟಂಬ ಹೈದರಾಬಾದ್ ಗೆ ಹೋಗಿ ನೆಲಿಸಿದ್ದರಂತೆ. ಹರಿಕೃಷ್ಣ ಅವರು ಶಾಲಿನಿ ಅವರನ್ನು ಎರಡನೇ ಮದುವೆ ಮಾಡಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com