ಮಲ್ಟಿಪ್ಲೆಕ್ಸ್‌ ಟಿಕೆಟ್ ದರ ಮಿತಿ ರು. 200: ಜಾರಿಗೆ ಸರ್ಕಾರದ ಮೀನಾಮೇಷ!

ರಾಜ್ಯ ಹಣಕಾಸು ಬಜೆಟ್ 2017-18ರ ಘೋಷಣೆಯಂತೆ ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ 200 ರು. ಟಿಕೆಟ್ ದರ ಕ್ರಮ...
ಮಲ್ಟಿಪ್ಲೆಕ್ಸ್
ಮಲ್ಟಿಪ್ಲೆಕ್ಸ್
ಬೆಂಗಳೂರು: ರಾಜ್ಯ ಹಣಕಾಸು ಬಜೆಟ್ 2017-18ರ ಘೋಷಣೆಯಂತೆ ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ 200 ರು. ಟಿಕೆಟ್ ದರ ಕ್ರಮ ಏಪ್ರಿಲ್ 1ರಿಂದ ಜಾರಿಯಾಗಬೇಕಿದ್ದು 6 ದಿನ ಕಳೆದರೂ ಇನ್ನು ಜಾರಿಗೆ ಬಂದಿಲ್ಲ. 
ಏಪ್ರಿಲ್ 1ರ ನಂತರ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ಖರೀದಿಸಿದ ಪ್ರೇಕ್ಷಕರಿಗೆ ಶಾಕ್ ಎದುರಾಗಿದೆ. ಬಜೆಟ್ ನಂತೆ ಏಪ್ರಿಲ್ 1ರಿಂದಲೇ ಗರಿಷ್ಠ 200 ರುಪಾಯಿ ದರ ಬದಲಿಗೆ ಹೆಚ್ಚಿನ ಹಣ ನೀಡಿ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಈ ಬಗ್ಗೆ ಸಿಬ್ಬಂದಿಯನ್ನು ಕೇಳಿದರೆ ಸರ್ಕಾರದಿಂದ ನಮಗೆ ಅಧಿಕೃತ ಆದೇಶ ಬಂದಿಲ್ಲ ಹೀಗಾಗಿ ದರ ತಗ್ಗಿಸಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. 
ಇನ್ನು ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ಇದನ್ನು ಜಾರಿಗೆ ತರುವಲ್ಲಿ ವಿಳಂಬ ಮಾಡುತ್ತಿದೆ. ಕಾರಣ ಸದ್ಯ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚುನಾವಣಾ ಪ್ರಚಾರದಲ್ಲಿ ತೊಡಿಗಿರುವುದರಿಂದ ಕೆಲ ಕಾಯ್ದಿಗಳ ಜಾರಿ ತಡವಾಗುತ್ತಿದೆ ಎಂದು ಹೇಳಲಾಗಿದೆ. 
ಬಜೆಟ್ ನಲ್ಲಿ ನಿಗದಿ ಮತ್ತು ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲೇಬೇಕು ಎಂದು ಪ್ರಸ್ತಾವ ಮಂಡಿಸಿದರೆ ಸಾಲದು, ಅದಕ್ಕಾಗಿ ಸರ್ಕಾರ ವಿಶೇಷ ಕಾಯ್ದಿಯನ್ನು ಜಾರಿಗೊಳಿಸಬೇಕು. ಇಲ್ಲವೇ ಈಗಿರುವ ಕಾನೂನಿಗೆ ತಿದ್ದುಪಡಿಯನ್ನಾದರೂ ಮಾಡಬೇಕಿದೆ. 
ಬಜೆಟ್ ನಲ್ಲಿ ಘೋಷಿಸಿದ್ತಂತೆ ಏಪ್ರಿಲ್ 1ರಿಂದ ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಟಿಕೆಟ್ ದರ ನಿಗದಿ ಕುರಿತು ಇನ್ನೂ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅದಕ್ಕೆ ಸ್ವಲ್ಪ ಕಾಲಾವಕಾಸ ಹಿಡಿಯುತ್ತದೆ. ಬಹುಶಃ 15-20 ದಿನಗಳಲ್ಲಿ ಆದೇಶ ಹೊರಬೀಳಬಹುದು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com